ತುಮಕೂರು: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ತುಮಕೂರು: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ತಾಲೂಕು ಅರಕೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮಧುಗಿರಿತಾಲೂಕಿನ ಕವಣದಾಲದ ಪುಷ್ಪಲತಾ, ಮಕ್ಕಳು ಹೇಮಾ ಮತ್ತು ಯಶವಂತ್ ಎಂದು ಗುರುತಿಸಲಾಗಿದೆ.
ಪುಷ್ಪಲತಾ ತನ್ನ ಇಬ್ಬರು ಮಕ್ಕಳೊಂದಿಗೆ ತಮ್ಮನ ಮನೆ ಅರಕೆರೆಗೆ ಬಂದಿದ್ದರು. ಅಂಗಡಿಗೆ ಹೋಗಿ ಬರುತ್ತೇವೆಂದು ತಮ್ಮನ ಮನೆಯವರಿಗೆ ಹೇಳಿ ಹೋಗಿದ್ದರು. ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಾವಿಯಲ್ಲಿ ಪುಷ್ಪಲತಾ ಶವ ತೇಲುತ್ತಿದ್ದು ಕೋರಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
Next Story





