ಸಿಎಂ ಬೊಮ್ಮಾಯಿ ಮಾಧ್ಯಮ ಸಲಹೆಗಾರರಾಗಿ ಮೋಹನ್ ಕೃಷ್ಣ, ಸಂಯೋಜಕರಾಗಿ ಪಾಗೋಜಿ ನೇಮಕ

ಬೆಂಗಳೂರು, ಸೆ.15: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಲಹೆಗಾರರನ್ನಾಗಿ ಬಿಜೆಪಿ ವಕ್ತಾರ ಮೋಹನ್ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ.
ಇವರ ಜೊತೆ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾಗಿ (ಮೀಡಿಯಾ ಕೋ–ಆರ್ಡಿನೇಟರ್) ಪತ್ರಕರ್ತ, ಧಾರವಾಡ ಮೂಲದ ಶಂಕರ್ ಪಾಗೋಜಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಹಂತೇಶ್ ಸೆ.14 ರಂದು ಆದೇಶ ಹೊರಡಿಸಿದ್ದಾರೆ.
Next Story





