ಬ್ರಹ್ಮಾವರ: ಸೆ.17ರಂದು ಉಚಿತ ಆರೋಗ್ಯ ತಪಾಸಣೆ
ಬ್ರಹ್ಮಾವರ, ಸೆ.15: ಜಯಂಟ್ಸ್ ಸಪ್ತಾಹದ ಅಂಗವಾಗಿ ಸೆ.17ರ ಬೆಳಗ್ಗೆ 9.30ರಿಂದ ಅಪರಾಹ್ನ 12ರ ತನಕ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಲ್ಲಿ ಉಡುಪಿಯ ಸಿ.ಎಸ್.ಐ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಸಾಮಾನ್ಯ ಆರೋಗ್ಯ ತಜ್ಞರಿಂದ ಆರೋಗ್ಯ ತಪಾಸಣೆ ನಡೆಯಲಿದೆ.
ಇದರಲ್ಲಿ ಉಚಿತ ಇ.ಸಿ.ಜಿ, ಬಿ.ಎಮ್.ಐ, ಪಾದ ಸಂವೇದನೆ ಪರೀಕ್ಷೆ, ಮಧುಮೇಹ ರಕ್ತ ತಪಾಸಣೆ, ರಕ್ತದೊತ್ತಡ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ.: 9845254374ನ್ನು ಸಂಪರ್ಕಿಸುವಂತೆ ಜಯಂಟ್ಸ್ ಬ್ರಹ್ಮಾವರ ಪ್ರಕಟಣೆಯಲ್ಲಿ ತಿಳಿಸಿದೆ.
Next Story