ಸೆ.17ರಿಂದ ಮರ್ಕಝ್ ಸರ್ಕಲ್ ಸಮಾವೇಶ; ಮರ್ಕಝ್ ನಾಲೇಜ್ ಸಿಟಿ ಉದ್ಘಾಟನಾ ಕಾರ್ಯಕ್ರಮ

ಮಂಗಳೂರು, ಸೆ.15: ಮರ್ಕಝ್ ನಾಲೇಜ್ ಸಿಟಿ ಉದ್ಘಾಟನಾ ಕಾರ್ಯಕ್ರಮದ ಯಶಸ್ವಿಗಾಗಿ ರೂಪುಗೊಂಡಿರುವ ಮರ್ಕಝ್ ನಾಲೇಜ್ ಸಿಟಿ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಜಿಲ್ಲೆಯ 13 ಕೇಂದ್ರಗಳಲ್ಲಿ ಮರ್ಕಝ್ ಸರ್ಕಲ್ ಸಮಾವೇಶ ಹಾಗೂ ಮನೆಗೊಂದು ಮುಸಲ್ಲಾ ಅಭಿಯಾನವು ಸೆ.17ರಿಂದ ಅಕ್ಟೋಬರ್ 9ರವರೆಗೆ ಆಯೋಜಿಸಲು ನಗರದ ಅಡ್ಯಾರ್ ಕಣ್ಣೂರು ಸುನ್ನೀ ಸೆಂಟರ್‌ನಲ್ಲಿ ಗುರುವಾರ ನಡೆದ ಜಿಲ್ಲಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಮರ್ಕಝ್ ನಾಲೇಜ್ ಸಿಟಿ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಖಲೀಲ್ ಮಾಲಿಕಿ ಬೋಳಂತೂರು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ ಪದವು ಮಾತನಾಡಿದರು.
ಮರ್ಕಝ್ ಕೈಕಂಬದ ಬದ್ರುದ್ದೀನ್ ಅಝ್ಹರಿ ಬಡಕಬೈಲು, ಉಳ್ಳಾಲ ಹನೀಫ್ ಹಾಜಿ, ಇಬ್ರಾಹೀಂ ಸಖಾಫಿ ಸೆರ್ಕಳ, ಅಬ್ದುಲ್ ಸಲಾಂ ಮದನಿ ಗುಂಡುಕಲ್ಲು, ಅಬ್ದುಲ್ ಮುತ್ತಲಿಬ್ ಮೂಡುಬಿದಿರೆ ಭಾಗವಹಿಸಿದ್ದರು.
ಜನರಲ್ ಕನ್ವೀನರ್ ಅಶ್ರಫ್ ಕಿನಾರ ಸ್ವಾಗತಿಸಿ, ವಂದಿಸಿದರು.





