ಜಮ್ಮುಕಾಶ್ಮೀರ: ಗುಂಡಿನ ಕಾಳಗದಲ್ಲಿ ಇಬ್ಬರು ಶಂಕಿತ ಉಗ್ರರು ಸಾವು
ಹೊಸದಿಲ್ಲಿ, ಸೆ. 15: ಶ್ರೀನಗರದ ನೌಗಾಂವ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಜೊತೆ ಬುಧವಾರ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಉಗ್ರರನ್ನು ಅಲ್ ಖೈದಾದ ಅಧೀನ ಸಂಘಟನೆಯಾದ ಅನ್ಸಾರ್ ಗಝ್ವತ್‌ನ ಉಲ್ ಹಿಂದ್ ಎಂಬ ಉಗ್ರ ಸಂಘಟನೆಯ ಸದಸ್ಯರು ಎಂದು ತಿಳಿದು ಬಂದಿದೆ. ಮೃತರನ್ನು ಐಜಾಝ್ ರಸೂಲ್ ನಝರ್ ಹಾಗೂ ಶಾಹೀದ್ ಅಹ್ಮದ್ ಆಲಿಯಾಸ್ ಅಬು ಹಂಝಾ ಎಂದು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಪಶ್ಚಿಮಬಂಗಾಳದ ಪುಲ್ವಾಮ ಜಿಲ್ಲೆಯ ವಲಸೆ ಕಾರ್ಮಿಕರ ಮೇಲೆ ಸೆಪ್ಟಂಬರ್ 2ರಂದು ನಡೆಸಿದ ದಾಳಿಯಲ್ಲಿ ಈ ಶಂಕಿತ ಉಗ್ರರು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪುಲ್ವಾಮಾದ ಉಗೇರ್‌ಗಂಡ್ ನೇವಾ ಪ್ರದೇಶದಲ್ಲಿ ಮುನೀರುಲ್ ಇಸ್ಲಾಂ ಅವರನ್ನು ಶಂಕಿತ ಉಗ್ರರು ಗುಂಡು ಹಾರಿಸಿ ಹತ್ಯೆಗೈದಿದ್ದರು. ಕಳೆದ ವಾರ ಅನಂತ್‌ನಾಗ್ ಜಿಲ್ಲೆಯ ಪೋಶ್ಕೀರಿ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಶಂಕಿತ ಉಗ್ರರು ಮೃತಪಟ್ಟಿದ್ದರು. ಅವರನ್ನು ಹಿಜ್ಬುಲ್ ಮುಜಾಹಿದ್ದೀನ್‌ನ ದಾನಿಶ್ ಭಟ್ ಆಲಿಯಾಸ್ ಕೋಕಬ್ ದುರೀ ಹಾಗೂ ಬಶ್ರತ್ ನಬಿ ಎಂದು ಗುರುತಿಸಲಾಗಿತ್ತು.





