Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕ್ಷಯರೋಗ ಈಗಲೂ ಗಂಭೀರ ಆರೋಗ್ಯ ಬೆದರಿಕೆ

ಕ್ಷಯರೋಗ ಈಗಲೂ ಗಂಭೀರ ಆರೋಗ್ಯ ಬೆದರಿಕೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21

ಆರ್.ಎಚ್.ಆರ್.ಎಚ್.16 Sept 2022 10:22 AM IST
share
ಕ್ಷಯರೋಗ ಈಗಲೂ ಗಂಭೀರ ಆರೋಗ್ಯ ಬೆದರಿಕೆ

ಜಗತ್ತಿನ ಹೆಚ್ಚಿನ ಭಾಗಗಳಲ್ಲಿ, ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕ್ಷಯರೋಗವು ಮರುಪ್ರವೇಶಿಸಿದೆ. ಹೆಚ್ಚಿನ ಪ್ರಕರಣಗಳಲ್ಲಿ, ಎಚ್‌ಐವಿ/ಏಡ್ಸ್ ಹೊಂದಿದವರನ್ನು ಇದು ಬಾಧಿಸುತ್ತಿದೆ. ಒಂದು ಕಾಲದಲ್ಲಿ ಕ್ಷಯರೋಗವನ್ನು ‘‘ಬಿಳಿ ಪ್ಲೇಗ್’’ ಎಂಬುದಾಗಿ ಕರೆಯಲಾಗುತ್ತಿತ್ತು. ಈ ರೋಗವು ಸಾಂಕ್ರಾಮಿಕವಾಗಿದ್ದು ಮೂಗು ಅಥವಾ ಬಾಯಿಯ ಹನಿಗಳ ಮೂಲಕ ಹರಡುತ್ತದೆ. ಕ್ಷಯರೋಗ ಇರುವ ವ್ಯಕ್ತಿಯೋರ್ವ ಕೆಮ್ಮಿದಾಗ, ಮಾತನಾಡಿದಾಗ ಅಥವಾ ಸೀನಿದಾಗ ಈ ಹನಿಗಳು ಗಾಳಿಯಲ್ಲಿ ತೇಲಿಕೊಂಡು ಹೋಗುತ್ತವೆ. ಹೆಚ್ಚಿನ ಅಭಿವೃದ್ಧಿಶೀಲ ದೇಶಗಳಲ್ಲಿ, ಎಚ್‌ಐವಿ/ಏಡ್ಸ್‌ನ ಅನುಪಸ್ಥಿತಿಯ ಹೊರತಾಗಿಯೂ ಕ್ಷಯರೋಗವು ಗಂಭೀರ ಆರೋಗ್ಯ ಬೆದರಿಕೆಯಾಗಿಯೇ ಮುಂದುವರಿಯಲಿದೆ. ಯಾಕೆಂದರೆ, ನೈರ್ಮಲ್ಯದ ಕೊರತೆ, ಬಡತನ ಮತ್ತು ಹೆಚ್ಚಿನ ಅನಕ್ಷರತೆಯಿಂದಾಗಿ ಈ ದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಸವಾಲಾಗಿಯೇ ಮುಂದುವರಿಯಲಿದೆ.

ವಯಸ್ಸಿನೊಂದಿಗೆ ಕ್ಷಯರೋಗ ಸಾಧ್ಯತೆಯೂ ಹೆಚ್ಚಳ

ಕ್ಷಯರೋಗ ತಗಲುವ ಸಾಧ್ಯತೆಯು ವಯಸ್ಸಿನೊಂದಿಗೆ ಹೆಚ್ಚುತ್ತದೆ. ಪ್ರಕರಣಗಳು 15-59 ವರ್ಷ ವಯೋಗುಂಪಿನವರಿಗಿಂತ (ಪ್ರತೀ ಲಕ್ಷಕ್ಕೆ 237)

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಗುಂಪಿನವರಲ್ಲಿ (ಪ್ರತೀ ಲಕ್ಷಕ್ಕೆ 567) ಎರಡು ಪಟ್ಟಿಗಿಂತಲೂ ಅಧಿಕ ಹಾಗೂ 15 ಮತ್ತು ಅದಕ್ಕಿಂತ ಕೆಳಗಿನ ವರ್ಷದ ಮಕ್ಕಳ ಗುಂಪಿಗಿಂತ (ಪ್ರತೀ ಲಕ್ಷಕ್ಕೆ 33) 17 ಪಟ್ಟು ಅಧಿಕ.

ನಗರ ಪ್ರದೇಶಗಳಿಗೆ ಹೋಲಿಸಿದರೆ (ಪ್ರತೀ ಲಕ್ಷಕ್ಕೆ 179) ಗ್ರಾಮೀಣ ಪ್ರದೇಶಗಳಲ್ಲಿ (ಪ್ರತೀ ಲಕ್ಷಕ್ಕೆ 242) ಕ್ಷಯರೋಗ ಪ್ರಮಾಣ ಅಧಿಕ.

ಜನದಟ್ಟಣೆ ಹೆಚ್ಚಿದಂತೆ ಕ್ಷಯರೋಗ ಪ್ರಮಾಣವೂ ಹೆಚ್ಚುತ್ತದೆ. ಕೋಣೆ ಯೊಂದರಲ್ಲಿ ಮಲಗುವ ಜನರ ಸಂಖ್ಯೆ ಮೂರಕ್ಕಿಂತ ಕಡಿಮೆಯಿರುವ ಕುಟುಂಬ ಗಳಲ್ಲಿ ಕ್ಷಯರೋಗ ಕಾಣಿಸಿಕೊಳ್ಳುವ ಪ್ರಮಾಣ ಪ್ರತೀ ಲಕ್ಷಕ್ಕೆ 220 ಇದ್ದರೆ, ಕೋಣೆಯೊಂದರಲ್ಲಿ ಮಲಗುವ ಜನರ ಸಂಖ್ಯೆ 7 ಅಥವಾ ಅದಕ್ಕಿಂತ ಹೆಚ್ಚಿರುವ ಕುಟುಂಬಗಳಲ್ಲಿ ಕ್ಷಯರೋಗ ಕಾಣಿಸಿಕೊಳ್ಳುವ ಪ್ರಮಾಣ ಪ್ರತೀ ಲಕ್ಷಕ್ಕೆ 258 ಆಗಿದೆ.

ಕುಟುಂಬಗಳು ಅಡುಗೆ ಮಾಡಲು ಬಳಸುವ ಇಂಧನವನ್ನು ಅವಲಂಬಿಸಿ ಕ್ಷಯರೋಗಿಗಳ ಪ್ರಮಾಣದಲ್ಲಿ ಭಾರೀ ಏರಿಳಿತ ದಾಖಲಾಗಿದೆ. ವಿದ್ಯುತ್, ಎಲ್‌ಪಿಜಿ, ನೈಸರ್ಗಿಕ ಅನಿಲ ಅಥವಾ ಬಯೋಗ್ಯಾಸ್ ಬಳಸುವ ಕುಟುಂಬಗಳ ಸದಸ್ಯರಲ್ಲಿ ಕ್ಷಯರೋಗ ಕಾಣಿಸಿಕೊಳ್ಳುವ ಪ್ರಮಾಣ ಪ್ರತೀ ಲಕ್ಷಕ್ಕೆ 179 ಆಗಿದ್ದರೆ, ಹುಲ್ಲು ಅಥವಾ ಗಿಡಗಂಟಿಗಳನ್ನು ಉರುವಲು ಆಗಿ ಬಳಸುವ ಕುಟುಂಬಗಳ ಸದಸ್ಯರಲ್ಲಿ ಕ್ಷಯರೋಗ ಕಾಣಿಸಿಕೊಳ್ಳುವ ಪ್ರಮಾಣ ಪ್ರತೀ ಲಕ್ಷಕ್ಕೆ 490 ಆಗಿದೆ.

ರಾಜ್ಯಗಳ ಪೈಕಿ, ಪಂಜಾಬ್ (ಪ್ರತೀ ಲಕ್ಷಕ್ಕೆ 24) ಕ್ಷಯರೋಗಿಗಳ ಸಂಖ್ಯೆ ಕನಿಷ್ಠವಾಗಿದ್ದರೆ, ಸಿಕ್ಕಿಂನಲ್ಲಿ (ಪ್ರತೀ ಲಕ್ಷಕ್ಕೆ 634) ಗರಿಷ್ಠವಾಗಿದೆ. ಈ ಸಂಖ್ಯೆಯು ಮೇಘಾಲಯದಲ್ಲಿ ಪ್ರತೀ ಲಕ್ಷಕ್ಕೆ 626 ಆಗಿದ್ದರೆ, ಮಿರೆರಾಮ್‌ನಲ್ಲಿ ಪ್ರತೀ ಲಕ್ಷಕ್ಕೆ 624 ಮತ್ತು ನಾಗಾಲ್ಯಾಂಡ್‌ನಲ್ಲಿ ಪ್ರತೀ ಲಕ್ಷಕ್ಕೆ 616 ಆಗಿದೆ. ಅದೇ ವೇಳೆ, ಕಡಿಮೆ ಕ್ಷಯರೋಗಿಗಳು ಇರುವ ರಾಜ್ಯಗಳ ಸಾಲಿನಲ್ಲಿ ಹರ್ಯಾಣ (ಪ್ರತೀ ಲಕ್ಷಕ್ಕೆ 105) ಮತ್ತು ಛತ್ತೀಸ್‌ಗಡ (ಪ್ರತೀ ಲಕ್ಷಕ್ಕೆ 112)ಗಳು ಬರುತ್ತವೆ.

ಲಕ್ಷ ಜನರಲ್ಲಿ 222 ಮಂದಿಗೆ ಕ್ಷಯ

ಭಾರತದಲ್ಲಿ ಪ್ರತೀ ಒಂದು ಲಕ್ಷ ಜನರ ಪೈಕಿ 222 ಮಂದಿ ಕ್ಷಯರೋಗಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆದಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 (ಎನ್‌ಎಫ್‌ಎಚ್‌ಎಸ್-5) ತಿಳಿಸಿದೆ. ಮಹಿಳೆಯರಿಗಿಂತ (ಪ್ರತೀ ಲಕ್ಷ ಮಂದಿಗೆ 162) ಪುರುಷರಲ್ಲಿ (ಪ್ರತೀ ಲಕ್ಷ ಮಂದಿಯಲ್ಲಿ 283) ಕ್ಷಯರೋಗದ ಪ್ರಮಾಣ ಹೆಚ್ಚು. ವರದಿಯಾಗಿರುವ ಕ್ಷಯರೋಗ ಪ್ರಕರಣಗಳ ಪೈಕಿ ಶೇ. 97 ಮಂದಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆದಿದ್ದಾರೆ.

ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ

2015-16 ಮತ್ತು 2019-21ರ ನಡುವಿನ ಅವಧಿಯಲ್ಲಿ ಚಿಕಿತ್ಸೆ ಪಡೆದಿರುವ ಕ್ಷಯರೋಗಿಗಳ ಒಟ್ಟಾರೆ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2015-16ರಲ್ಲಿ ಈ ಸಂಖ್ಯೆ ಪ್ರತೀ ಲಕ್ಷಕ್ಕೆ 305 ಇದ್ದರೆ, 2019-21ರಲ್ಲಿ ಅದು ಪ್ರತೀ ಲಕ್ಷಕ್ಕೆ 222 ಆಗಿದೆ. ಇದೇ ಅವಧಿಯಲ್ಲಿ ಪುರುಷ ಕ್ಷಯ ರೋಗಿಗಳ ಪ್ರಮಾಣ ಪ್ರತೀ ಲಕ್ಷಕ್ಕೆ 389 ಇದ್ದದ್ದು, 2019-21ರಲ್ಲಿ ಪ್ರತೀ ಲಕ್ಷಕ್ಕೆ 283ಕ್ಕೆ ಇಳಿದಿದೆ. ಹಾಗೂ ಮಹಿಳಾ ಕ್ಷಯ ರೋಗಿಗಳ ಪ್ರಮಾಣ ಪ್ರತೀ ಲಕ್ಷಕ್ಕೆ 220 ಇದ್ದದ್ದು, 2019-21ರಲ್ಲಿ ಪ್ರತೀ ಲಕ್ಷಕ್ಕೆ 162 ಆಗಿದೆ.

share
ಆರ್.ಎಚ್.
ಆರ್.ಎಚ್.
Next Story
X