ಮಲ್ಪೆ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಉಡುಪಿ : ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ಆಶ್ರಯ ದಲ್ಲಿ ಉಡುಪಿ ಸಿಎಸ್‌ಐ ಲೋಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆ, ಮಲ್ಪೆ ಜಾಮೀಯ ಮಸೀದಿ ಅಬೂಬಕ್ಕರ್ ಸಿದ್ದೀಕ್, ವೈದ್ಯಕೀಯ ಪ್ರತಿನಿಧಿಗಳ ಸಂಘ ಹಾಗೂ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕರ್ ಇವುಗಳ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಇತ್ತೀಚೆಗೆ ಮಲ್ಪೆ ಅಬೂಬಕ್ಕರ್ ಸಿದ್ದೀಕ್ ಜಾಮೀಯ ಮಸೀದಿಯಲ್ಲಿ ಜರಗಿತು.
ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ಅಧ್ಯಕ್ಷ ಖಾಸಿಮ್ ಬಾರಕೂರು, ವೈದ್ಯರಾದ ಡಾ.ಅರ್ಜುನ್ ಬಳ್ಳಾಲ್, ಡಾ.ರೂಪಾ, ಡಾ.ನಾಗೇಶ್ ನಾಯಕ್, ಡಾ.ಗಣೇಶ್ ಕಾಮತ್, ಡಾ.ನಸೂಹಾ ಜಮಾಲ್ ಉಸ್ತಾದ್, ವೈದ್ಯಕೀಯ ಪ್ರತಿನಿಧಿಗಳ ಸಂಘದ ಮಧುಸೂದನ್ ಹೇರೂರು, ಮಿಷನ್ ಆಸ್ಪತ್ರೆಯ ಪಿಆರ್‌ಓ ರೋಹಿ ರತ್ನಾಕರ್, ಪ್ರಸನ್ನ ಕಾರಂತ್, ರಾಘವೇಂದ್ರ ಕಾರ್ವಲು, ರವೀಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಸಂಸ್ಥೆಯ ಸದಸ್ಯರಾದ ಖತೀಬ್ ಅಬ್ದುಲ್ ರಶೀದ್, ಅಸೇನಾರ್ ಅಬ್ದುಲ್ಲಾ, ಮುಕೀರ್ ಅಜ್ಮದ್ ಶೇಕ್, ಮುಹಮ್ಮದ್ ಮೌಲಾ, ಮುಹಮ್ಮದ್ ಹುಸೇನ್, ನಾಸೀರ್ ಯಾಕೂಬ್, ಝಕರೀಯ ನೇಜಾರು ಉಪಸ್ಥಿತರಿದ್ದರು. ಮೌಲಾನ ಇಮ್ರಾನುಲ್ಲಾ ಕಿರಾತ್ ಪಠಿಸಿದರು. ಸುಮಾರು 110 ಮಂದಿ ಶಿಬಿರದ ಪ್ರಯೋಜನವನ್ನು ಪಡೆದರು.





