ಮಂಗಳೂರು: ಸೆ.19ರಿಂದ ಅಹವಾಲು ಸ್ವೀಕಾರ

ಮಂಗಳೂರು, ಸೆ.16: ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಸೆ.19ರ ಪೂ.11:30ರಿಂದ ಮಧ್ಯಾಹ್ನ 1ರವರೆಗೆ ಸುಳ್ಯ ತಾಲೂಕಿನ ತಹಶೀಲ್ದಾರರ ಕಚೇರಿ, ಸೆ.20ರ ಪೂ.11ರಿಂದ ಮಧ್ಯಾಹ್ನ 1ರವರೆಗೆ ಮುಲ್ಕಿ ನಗರ ಪಂಚಾಯತ್ ಸಮುದಾಯ ಭವನ, ಸೆ.21ರ ಪೂ. 11:30ರಿಂದ ಮಧ್ಯಾಹ್ನ 1ರವರೆಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಹೆಚ್ಚಿನ ಮಾಹಿತಿಗೆ ಪೊಲೀಸ್ ಅಧೀಕ್ಷಕರ ಕಚೇರಿ:0824-2950997, 9886542369. ಪೊಲೀಸ್ ಉಪಾಧಿಕ್ಷಕರ ಕಚೇರಿ-1:0824-2453420, 9448635348. ಪೊಲೀಸ್ ಉಪಾಧೀಕ್ಷಕರ ಕಚೇರಿ-2:0824-2453420. ಪೊಲೀಸ್ ನಿರೀಕ್ಷಕರ ಕಚೇರಿ:0824-2427237ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





