ಯುಎಇಯಿಂದ ಮಂಗಳೂರಿಗೆ ಸರಕು ಸಾಗಿಸುತ್ತಿದ್ದ ಹಡಗಿನಲ್ಲಿ ಅಪಾಯದಲ್ಲಿ ಸಿಲುಕಿದ್ದ 19 ಮಂದಿಯ ರಕ್ಷಣೆ

ಸಾಂದರ್ಭಿಕ ಚಿತ್ರ
ಮಂಗಳೂರು, ಸೆ.16: ಹಡಗಿನಲ್ಲಿ ಅಪಾಯದಲ್ಲಿ ಸಿಲುಕಿದ್ದ 19 ಮಂದಿಯನ್ನು ಭಾರತೀಯ ಕೋಸ್ಟ್ಗಾರ್ಡ್ ಶುಕ್ರವಾರ ರಕ್ಷಿಸಿದೆ ಎಂದು ವರದಿಯಾಗಿದೆ.
ಯುಎಇಯಿಂದ ಮಂಗಳೂರಿಗೆ ಸರಕು ಸಾಗಿಸುತ್ತಿದ್ದ ಹಡಗು ರತ್ನಗಿರಿಯಿಂದ ಸುಮಾರು 41 ಮೈಲು ದೂರದಲ್ಲಿ ಅಪಾಯದಲ್ಲಿ ಸಿಲುಕಿತ್ತು. ಅದರಲ್ಲಿ 18 ಮಂದಿ ಭಾರತೀಯರು ಮತ್ತು ಒಬ್ಬ ಇಥಿಯೋಪಿಯನ್ ಪ್ರಜೆ ಇದ್ದರೆನ್ನಲಾಗಿದೆ.
ಯುಎಇಯ ಖೋರ್ ಫಕ್ಕನ್ನಿಂದ 3,911 ಮೆಟ್ರಿಕ್ ಟನ್ ಅಸ್ಫಾಲ್ಟ್ ಬಿಟುಮೆನ್ನ್ನು ಹೊತ್ತು ಮಂಗಳೂರು ಕಡೆಗೆ ಈ ಹಡಗು ಬರುತ್ತಿತ್ತು. ಬೆಳಗ್ಗೆ ಸುಮಾರು 9.30ರ ವೇಳೆಗೆ ಹಡಗು ಅಪಾಯಕ್ಕೆ ಸಿಲುಕಿತ್ತು. ಈ ಬಗ್ಗೆ ಮಾಹಿತಿ ಪಡೆದ ಮುಂಬೈ ಕೋಸ್ಟ್ಗಾರ್ಡ್ ತಕ್ಷಣ ಸುಜೀತ್ ಮತ್ತು ಅಪೂರ್ವ ಎಂಬ ಎರಡು ಹಡಗುಗಳು ಹಾಗೂ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ 19 ಮಂದಿಯನ್ನು ರಕ್ಷಿಸಿದೆ. ಈ ಹಡಗು ಮುಳುಗುವ ಹಂತದಲ್ಲಿದೆ ಎಂದು ಕೋಸ್ಟ್ಗಾರ್ಡ್ ಮೂಲಗಳು ತಿಳಿಸಿವೆ.
Next Story





