ಬೆಂಗಳೂರು: ನಿವೃತ್ತ ಶಿಕ್ಷಕಿಯ ಕೊಲೆ ಪ್ರಕರಣ; ಆರೋಪಿಗಳ ಬಂಧನ

ಪ್ರಸನ್ನಕುಮಾರಿ - ಕೊಲೆಯಾದ ನಿವೃತ್ತ ಶಿಕ್ಷಕಿ
ಬೆಂಗಳೂರು, ಸೆ.17: ಒಂಟಿಯಾಗಿ ವಾಸವಿದ್ದ ನಿವೃತ್ತ ಶಿಕ್ಷಕಿಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸುವಲಲ್ಲಿ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರಣ್ಯಪುರದ ನಾಗೇಂದ್ರ (31), ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರಾಮ್ರಾಜು (28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ. ಅನೂಪ್ಶೆಟ್ಟಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ 2 ಚಿನ್ನದ ಬಳೆಗಳು, ಚಿನ್ನದ ಚೈನು ಸೇರಿ 68 ಗ್ರಾಂ ಚಿನ್ನಾಭರಣಗಳು, ಯಮಹಾ ಬೈಕ್, 2 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಪಿಗಳುವಿದ್ಯಾರಣ್ಯಪುರದ ಅಂಭಾಭವಾನಿ ಲೇಔಟ್ನ 2ನೆ ಮಹಡಿಯಲ್ಲಿ ಒಂಟಿಯಾಗಿ ವಾಸವಾಗಿದ್ದ ನಿವೃತ್ತ ಶಿಕ್ಷಕಿ ಪ್ರಸನ್ನಕುಮಾರಿ (68) ಅವರನ್ನು ಸೆ.8ರಂದು ಕೊಲೆ ಮಾಡಿ ಮೈ ಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಸನ್ನಕುಮಾರಿ ಅವರು ವಾಸವಿದ್ದ ಕಟ್ಟಡದ ಮಾಲಕರು ನೀಡಿದ್ದ ದೂರನ್ನಾಧರಿಸಿ ಕಾರ್ಯಾಚರಣೆ ಕೈಗೊಂಡ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನಿವೃತ್ತ ಶಿಕ್ಷಕಿಯ ಕೊಲೆ







