ಕಾಪು ಬೀಚ್‍ನಲ್ಲಿ ಸ್ವಚ್ಛತಾ ಅಭಿಯಾನ

ಕಾಪು : ಕಾಪು ಬೀಚ್‍ನ್ನು ಪುರಸಭೆಯ ಆಯೋಜನೆಯಲ್ಲಿ ವಿವಿಧ ಸಂಘಟನೆಗಳೊಂದಿಗೆ ಕಾಪು ಬೀಚ್ ಸ್ವಚ್ಛತಾ ಅಭಿಯಾನ ಶನಿವಾರ ನಡೆಯಿತು.
ಪ್ರವಾಸೋದ್ಯಮ ಇಲಾಖೆ, ಭಾರತೀಯ ಸ್ವಚ್ಛತಾ ಲೀಗ್, ದೇಸೀಕ್ರೂ ಸಂಘಟನೆ, ಜಿಪ್ಸಿಶನ್ ಸಂಸ್ಥೆಯಿಂದ ವತಿಯಿಂದ ಶನಿವಾರ ಬೆಳಗ್ಗೆ ಕಾಪು ಲೈಟ್ ಹೌಸ್ ಬೀಚಿನಲ್ಲಿ ನಡೆದ ಸ್ವಚ್ಛತಾ ಅಭಿಯಾನಕ್ಕೆ ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಉಚ್ಘಾಟಿಸಿದರು.
ಕಾಪು ಪುರಸಭಾ ಅಧಿಕಾರಿ ವೆಂಕಟೇಶ್ ನಾವಡ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರವಾದ ಕಾಪು ಬೀಚ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತಿದ್ದಾರೆ. ಈ ಬೀಚ್‍ನ್ನು ಸ್ವಚ್ಛವಾಗಿಡಬೇಕು. ಕಾಪು ಪುರಸಭೆ ಈ ನಿಟ್ಟಿನಲ್ಲಿ ಹೆಚ್ಚು ಮುತವರ್ಜಿ ವಹಿಸುತ್ತದೆ. ಇನ್ನು ಜನರಲ್ಲಿ ಸ್ವಚ್ಛತೆಯ ಬಗೆ ಜಾಗೃತಿ ಬರಬೇಕಾಗಿದೆ. ಈ ನಿಟ್ಟನಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಕಾಪು ಪುರಸಭಾ ಸದಸ್ಯರು, ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.
Next Story