ದೇರಳಕಟ್ಟೆ: ಉಚಿತ ಸ್ಕಾಲರ್ ಶಿಪ್ ಅಭಿಯಾನಕ್ಕೆ ಚಾಲನೆ

ದೇರಳಕಟ್ಟೆ, ಸೆ.18: ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ದೇರಳಕಟ್ಟೆ ಯುನಿಟ್ ವತಿಯಿಂದ ನಡೆಯುವ ಉಚಿತ ಸ್ಕಾಲರ್ ಶಿಪ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ದೇರಳಕಟ್ಟೆ ಎಸ್ಕೆಎಸ್ಸೆಸ್ಸೆಫ್ ಕಚೇರಿಯಲ್ಲಿ ನಡೆಯಿತು.
ಬದ್ರಿಯಾ ಜುಮಾ ಮಸೀದಿಯ ಖತೀಬ್ ಇಸ್ಹಾಖ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಭಿಯಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬೂಬಕರ್ ಹಾಗೂ ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎಂ.ಸತ್ತಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಳ್ಮ ಗ್ರಾಮ ಪಂಚಾಯತ್ ಸದಸ್ಯ ಇಬ್ರಾಹೀಂ ಬದ್ಯಾರ್, ಎಸ್.ವೈ.ಎಸ್. ನೇತಾರ ಮುಹಮ್ಮದ್ ನಡುಪದವು, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷ ಫೈಝಲ್ ಡಿ.ಎಂ., ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುನ್ಶಿದ್, ಎಸ್ಕೆಎಸ್ಸೆಸ್ಸೆಫ್ ಉಳ್ಳಾಲ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಅರ್ಷದ್, ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ದೇರಳಕಟ್ಟೆ ವಲಯ ಅಧ್ಯಕ್ಷ ಮುಝಮ್ಮಿಲ್ ಎಚ್.ಆರ್., ಜನರಲ್ ಕನ್ವೀನರ್ ಝುಲ್ಫಿಕರ್ ಅಲಿ ಎಚ್.ಕಲ್ಲು ಮೊದಲಾದವರು ಉಪಸ್ಥಿತರಿದ್ದರು.