ಫ್ರೆಂಡ್ಸ್ ಮದನಿ ನಗರ ಅಸೋಸಿಯೇಶನ್ ನಿಂದ ಸಾಧಕರಿಗೆ ಸನ್ಮಾನ

ಮಂಗಳೂರು, ಸೆ.18: ಫ್ರೆಂಡ್ಸ್ ಮದನಿ ನಗರ ಅಸೋಸಿಯೇಶನ್ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶುಕ್ರವಾರ ಮದನಿ ನಗರದ ಡೆಕ್ಕನ್ ಗಾರ್ಡನ್ ನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಯುಸಿಎ ಕಾರ್ಯಾಧ್ಯಕ್ಷ ಮಹೇಶ್ ಮಾತನಾಡಿ ಶುಭ ಹಾರೈಸಿದರು. ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ಝಮೀರ್, ನೌಶೀರ್, ಶಿಹಾಬ್ ತಂಙಳ್ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮುನವ್ವರ್ ಜೋಗಿಬೆಟ್ಟು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯುಸಿಎ ಅಧ್ಯಕ್ಷ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 'ಐಎಕ್ಸ್ ಇ ಕ್ರಿಕೆಟರ್' ಎಂಬ ನೂತನ ತಂಡವೊಂದು ಅಸ್ತಿತ್ವಕ್ಕೆ ತರಲಾಯಿತು. ಹೊಸ ತಂಡದ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು.
ಪಂಚಾಯತ್ ಸದಸ್ಯರಾದ ರೆಹನಾ ಬಾನು, ಸಿರಾಜ್, ಸಾದಿಕ್ ಉಪಸ್ಥಿತರಿದ್ದರು.
Next Story





