ಉಡುಪಿ | ಜಮೀಯ್ಯತುಲ್ ಫಲಾಹ್ ಹಿತೈಷಿಗಳ ಸಮ್ಮಿಲನ

ಉಡುಪಿ, ಸೆ.18: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ವತಿಯಿಂದ ಹಿತೈಷಿಗಳ ಸಮ್ಮಿಲನ ಇತ್ತೀಚೆಗೆ ಅಂಬಾಗಿಲಿನ ಅಮೃತ ಗಾರ್ಡನ್ ಸಭಾಂಗಣದಲ್ಲಿ ಜರುಗಿತು.
ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ಅಧ್ಯಕ್ಷ ಕಾಸಿಮ್ ಬಾರಕೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಶಬ್ಹಿ ಅಹ್ಮದ್ ಖಾಜಿ, ಎನ್‌ಆರ್‌ಸಿಸಿ ಜಿದ್ದಾ ಮಾಜಿ ಅಮೀರ್ ಎಸ್.ಎಂ. ಜಾಫರ್, ಜಮೀಯ್ಯತುಲ್ ಫಲಾಹ್ ಸಂಯೋಜಕ ಮೊಯ್ದಿನ್, ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಉದ್ಯಾವರ, ಉಡುಪಿ ಘಟಕದ ಮಾಜಿ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ಮಾತನಾಡಿದರು.
ಕೋಟ ಇಬ್ರಾಹಿಂ ಸಾಹೇಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ಸಮೀರ್ ಎಂ., ಸದಸ್ಯರಾದ ನಾಸೀರ್ ಯಾಕೂಬ್, ವಿ.ಎಸ್. ಉಮರ್, ಹಸೈನಾರ್ ಅಬ್ದುಲ್ಲಾ, ರಿಯಾಝ್ ಕುಕ್ಕಿಕಟ್ಟೆ, ನಝೀರ್ ನೇಜಾರ್, ಹಸನ್ ಅಜ್ಜರಕಾಡು, ಅನ್ವರ್ ಸಾಹೇಬ್, ಝಕರಿಯಾ ನೇಜಾರ್, ಮುಹಮ್ಮದ್ ಹುಸೇನ್, ಸಲಾವುದ್ದೀನ್, ಮುಶೀರ್ ಶೇಖ್, ಹನೀಫ್ ಕಡಿಯಾಳಿ, ಶಹಜಹಾನ್ ಮೊದಲಾದವರು ಉಪಸ್ಥಿತರಿದ್ದರು.
ಮೌಲಾನ ಇಮ್ರಾನ್ ಕಿರಾಅತ್ ಪಠಿಸಿದರು. ಮುಹಮ್ಮದ್ ಮೌಲಾನ ವಂದಿಸಿದರು.







