ಅಗಲಿದ ಕಲಾವಿದ ಶಂಭು ಕುಮಾರ್ ಕುಟುಂಬಕ್ಕೆ ನೆರವು

ಉಡುಪಿ, ಸೆ.18: ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದ, ಕಟೀಲು ಮೇಳದ ಕಲಾವಿದ ಶಂಭು ಕುಮಾರ್ ಕೊಡೆತ್ತೂರು ಅವರ ಪತ್ನಿ ಕವಿತಾ ಅವರಿಗೆ ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಒಂದು ಲಕ್ಷ ರೂ. ಚೆಕ್ ವಿತರಿಸಲಾಯಿತು.
ಚೆಕ್ ಹಸ್ತಾಂತರಿಸಿದ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಮಾತನಾಡಿ, ಯಕ್ಷಗಾನ ಕಲೆ ನಮ್ಮೆಲ್ಲರ ಮನಸ್ಸಿಗೆ ಆನಂದಾನುಭೂತಿಯನ್ನು ನೀಡುತ್ತದೆ. ಆದರೆ ಯಕ್ಷಗಾನ ಕಲಾವಿದರ ಬದುಕು ಕೆಲವೊಮ್ಮೆ ಅತಂತ್ರವಾಗಿ ರುತ್ತದೆ. ಅದರಲ್ಲೂ ಪ್ರಸಿದ್ಧರ ಪಂಕ್ತಿಯಲ್ಲಿಲ್ಲದೆ ಪೋಷಕ ಕಲಾವಿದರಾಗಿ ಪ್ರದರ್ಶನದ ಯಶಸ್ಸಿಗೆ ಕಾರಣರಾಗುವ ಕಲಾವಿದರ ಪ್ರತಿಭೆ ಪರಿಗಣಿತವಾಗು ವುದು ಕಡಿಮೆ. ಅಂಥವರ ಬದುಕಿನಲ್ಲಿ ಸಮಸ್ಯೆ ಉಂಟಾದಾಗ ನೆರವಾಗುವುದು ಸಮಾಜದ ಹೊಣೆ ಎಂದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಯಕ್ಷಗಾನ ಕಲಾರಂಗವು ಕಲಾವಿದರಿಗಾಗಿ ಯಕ್ಷನಿಧಿಯಂಥ ಯೋಜನೆಯನ್ನು ಹಮ್ಮಿಕೊಂಡಿದೆ. ಕೆಲವು ಸಮಯದ ಹಿಂದೆ ಗುಂಪು ವಿಮೆ, ಅಪಘಾತ ವಿಮೆಗಳಂಥ ಸೌಲಭ್ಯಗಳನು ್ನಹೊಂದಿದ್ದೆವು. ಆದರೆ, ಅದನ್ನು ನಿಭಾಯಿಸುವುದು ಸವಾಲಾಗಿದೆ. ಹಾಗಾಗಿ ಸಹೃದಯ ದಾನಿಗಳಿಂದ ನೆರವನ್ನು ಸಂಗ್ರಹಿಸಿ, ಕಷ್ಟಕಾಲದಲ್ಲಿ ಕಲಾವಿದರಿಗೆ ಅಥವಾ ಕಲಾವಿದರ ಕುಟುಂಬಕ್ಕೆ ನೆರವಾಗುವುದಕ್ಕೆ ಯಕ್ಷಗಾನ ಕಲಾರಂಗ ಮುಂದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಧರ್ಣಪ್ಪಮೂಲ್ಯ, ಕಲಾರಂಗದ ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಮನೋಹರ್ ಕೆ., ಜತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ, ಬಿ.ಭುವನಪ್ರಸಾದ್ ಹೆಗ್ಡ್ಡೆ, ಪೃಥ್ವಿರಾಜ್ ಕವತ್ತಾರ್, ವಿದ್ಯಾ ಪ್ರಸಾದ್, ಕಿಶೋರ್ ಸಿ.ಉದ್ಯಾವರ್, ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.







