ಉದ್ಯಾನವನಗಳ ಸುಸ್ಥಿತಿಗೆ ಆದ್ಯತೆ: ಮೇಯರ್ ಜಯಾನಂದ ಅಂಚನ್

ಮಂಗಳೂರು, ಸೆ.18; ಸಂಘ ಸಂಸ್ಥೆಗಳು, ಪತ್ರಕರ್ತರ ಸಂಘಟನೆ ಸಹಿತ ಎಲ್ಲರ ಸಹಯೋಗದಲ್ಲಿ ನಗರದ ಉದ್ಯಾನವನಗಳ ಸುಸ್ಥಿತಿಗೆ ಆದ್ಯತೆ ನೀಡಲಾಗುವುದು ಎಂದು ಮನಪಾ ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕ ಮತ್ತು ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಇದರ ಸಹಯೋಗದಲ್ಲಿ ನಗರದ ಹ್ಯಾಟ್‌ಹಿಲ್‌ನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದ ಆವರಣದ ರವಿವಾರ ನಡೆದ ‘ಸ್ವಚ್ಛತಾ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಗರದ ಉದ್ಯಾನವನಗಳ ಅಭಿವೃದ್ಧಿ, ಸ್ವಚ್ಛ ಪರಿಸರ, ಮೂಲಸೌಕರ್ಯಗಳ ಅಭಿವೃದ್ಧಿಗೆ ಗಮನಹರಿಸಲಾಗು ತ್ತಿದೆ ಎಂದು ಜಯಾನಂದ ಹೇಳಿದರು.
ಮನಪಾ ಉಪ ಮೇಯರ್ ಪೂರ್ಣಿಮಾ, ಸದಸ್ಯೆ ಸಂಧ್ಯಾ ಮೋಹನ ಆಚಾರ್ಯ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಸಭಾಪತಿ ಶಾಂತಾರಾಮ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಅಧ್ಯಕ್ಷೆ ವಸಂತಿ ಕಾಮತ್, ಪದಾಧಿಕಾರಿಗಳಾದ ಮಾಲಿನಿ ಹೆಬ್ಬಾರ್, ಭಾರತಿ ಪ್ರಕಾಶ್, ಜಯಶ್ರೀ ಬಾಸ್ರಿ, ಉಮಾರಾವ್, ರಮಾಮಣಿ ಭಟ್, ಶೋಭಾ ಭಟ್, ಉಷಾ ಸುಧಾಕರ್, ಶೋಭಾ ಶಿವರಾಮ್, ರೆಡ್‌ಕ್ರಾಸ್ ಘಟಕದ ಕೋಶಾಧಿಕಾರಿ ಮೋಹನ್ ಶೆಟ್ಟಿ, ಡಾ. ಕೆ.ಆರ್. ಕಾಮತ್, ಡಾ. ಸಚ್ಚಿದಾನಂದ ರೈ ಸಂಘಟಕರಾದ ರವಿಂದ್ರನಾಥ ಉಚ್ಚಿಲ, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಗೀತಾ ಬಿ.ರೈ ಪ್ರೆಸ್‌ಕ್ಲಬ್ ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಬಿ.ಹರೀಶ್ ರೈ, ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ರಾಘವ, ಪ್ರೀತಂ ರೈ ಲಲಿತಾ, ಎನ್‌ಐಟಿಕೆಯ ದೈಹಿಕ ಶಿಕ್ಷಕ ಶಿವರಾಂ ಹಿರಿಯರಾದ ಅಚ್ಯುತ ಐಲ್, ಮೋಹನ ಆಚಾರ್ಯ, ಭಾರತಿ ಉಚ್ಚಿಲ್,ವಿಭಾ ಶ್ರೀನಿವಾಸ್ ನಾಯಕ್, ಅಮೃತಾನಂದಮಯಿ ಸಂಸ್ಥೆಯ ಪ್ರತಿನಿಧಿ ಮಾಧವ ಸುವರ್ಣ ಉಪಸ್ಥಿತರಿದ್ದರು.







