200 ಕೋ. ರೂ. ಸುಲಿಗೆ ಪ್ರಕರಣ: ನಟಿ ಜಾಕ್ವೆಲಿನ್ ಫೆರ್ನಾಂಡಿಸ್‌ಗೆ ಸಮನ್ಸ್

ಹೊಸದಿಲ್ಲಿ, ಸೆ. 18: ಕಾರಾಗೃಹದಲ್ಲಿರುವ ವಂಚಕ ಸುಖೇಶ್ ಚಂದ್ರಶೇಖರ್‌ಗೆ ನಂಟು ಹೊಂದಿರುವ 200 ಕೋ. ರೂ. ಸುಲಿಗೆ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಸೋಮವಾರ ಹಾಜರಾಗುವಂತೆ ನಟಿ ಜಾಕ್ವೆಲಿನ್ ಫೆರ್ನಾಂಡಿಸ್‌ಗೆ ದಿಲ್ಲಿ ಪೊಲೀಸರು ಮತ್ತೊಮ್ಮೆ ಸಮನ್ಸ್ ನೀಡಿದ್ದಾರೆ.
ದಿಲ್ಲಿಯಲ್ಲಿರುವ ಆರ್ಥಿಕ ಅಪರಾಧ ದಳದ ಕಚೇರಿಗೆ ಸೋಮವಾರ ಬೆಳಗ್ಗೆ 11 ಗಂಟೆಗೆ ಆಗಮಿಸುವಂತೆ ಫೆರ್ನಾಂಡಿಸ್ ಅವರಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕ ಅಪರಾಧಗಳ ದಳ ಫೆರ್ನಾಂಡಿಸ್ ಅವರನ್ನು ಬುಧವಾರ 8 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿತ್ತು. ಈ ಪ್ರಕರಣದಲ್ಲಿ ವಂಚಕ ಸುಖೇಶ್ ಚಂದ್ರಶೇಖರ್‌ನನ್ನು ಜಾರಿ ನಿರ್ದೇಶನಾಲಯ ಕೂಡ ವಿಚಾರಣೆ ನಡೆಸಿದೆ.
‘ಬಹುಕೋಟಿ ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾದ ಹಾಗೂ ವಂಚಕ ಸುಖೇಶ್ ಚಂದ್ರಶೇಖರ್‌ನಿಂದ ಉಡುಗೊರೆ ಸ್ವೀಕರಿಸಿದ ಆರೋಪದ ಕುರಿತಂತೆ ಫೆರ್ನಾಂಡಿಸ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತುʼ ಎಂದು ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ರವೀಂದ್ರ ಯಾದವ್ ಅವರು ಬುಧವಾರ ತಿಳಿಸಿದ್ದರು.
Next Story





