ಮಾಜಿ ಸಚಿವ ಪಾರ್ಥ ಚಟರ್ಜಿ, ಸಹಾಯಕನ 48 ಕೋಟಿ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಂಡ ಈಡಿ
ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ

Photo:twitter
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ((Partha Chatterjee)ಹಾಗೂ ಅವರ ಸಹವರ್ತಿ ಅರ್ಪಿತಾ ಮುಖರ್ಜಿ ಅವರಿಗೆ ಸೇರಿರುವ ಅಂದಾಜು 48 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ(ಈಡಿ) Enforcement Directorate ಸೋಮವಾರ ತಿಳಿಸಿದೆ. .
ವಶಕ್ಕೆ ಪಡೆದಿರುವ ಆಸ್ತಿಗಳಲ್ಲಿ 35 ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿರುವ 7.89 ಕೋಟಿ ರೂ.ಮೌಲ್ಯದ ಠೇವಣಿ, ಒಟ್ಟು 40.33 ಕೋಟಿ ರೂ. ಮೌಲ್ಯದ ಫಾರ್ಮ್ಹೌಸ್, ಫ್ಲಾಟ್ಗಳು ಹಾಗೂ ಕೋಲ್ಕತ್ತಾದಲ್ಲಿರುವ "ಪ್ರೈಮ್ ಲ್ಯಾಂಡ್ " ನಂತಹ 40 ಸ್ಥಿರ ಆಸ್ತಿಗಳು ಸೇರಿವೆ ಎಂದು ಈಡಿ ಹೇಳಿಕೆಯಲ್ಲಿ ತಿಳಿಸಿದೆ.
Next Story





