ಬ್ರಾಹ್ಮಣ್ಯದ ಉಳಿವಿಗಾಗಿ ಐಕ್ಯದೊಂದಿಗೆ ಶ್ರಮಿಸೋಣ: ಅಶೋಕ ಹರ್ನಹಳ್ಳಿ
ಕೂಟ ಮಹಾಜಗತ್ತು ಸಾಲಿಗ್ರಾಮದಿಂದ ಕೇಂದ್ರೀಯ ಮಹಾಧಿವೇಶನ

ಸುರತ್ಕಲ್, ಸೆ.19: ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಬ್ರಾಹ್ಮಣ ಸಂಘಟನೆಯನ್ನು ಬಲಪಡಿಸಿ ಬ್ರಾಹ್ಮಣ್ಯದ ಉಳಿವಿನತ್ತ ಐಕ್ಯದೊಂದಿಗೆ ಶ್ರಮಿಸೋಣ ಎಂದು ಆಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹರ್ನಹಳ್ಳಿ ಕರೆ ನೀಡಿದ್ದಾರೆ.
ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ(ರಿ) ಕೇಂದ್ರ ಸಂಸ್ಥೆ ಮತ್ತು ಕಾಟಿಪಳ್ಳ ಕೃಷ್ಣಾಪುರ ಅಂಗ ಸಂಸ್ಥೆಯ ಸಹಭಾಗಿತ್ವದಲ್ಲಿ ರವಿವಾರ ನಡೆದ ಕೇಂದ್ರೀಯ ಮಹಾಧಿವೇಶನ ಮತ್ತು 69ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಧುನೀಕತೆಯೊಂದಿಗೆ ಹಿಂದೂ ಹಾಗೂ ಪೌರಾಣಿಕ ಹಿನ್ನೆಲೆಯ ಸನಾತನ ಸಂಸ್ಕೃತಿಯ ಮುಂದುವರಿಕೆ ಅಗತ್ಯ. ಯುವ ಸಮುದಾಯ ಬ್ರಾಹ್ಮಣತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಸಂಘಟಿತರಾಗಿ ರೂಪಿಸಿಕೊಳ್ಳಬೇಕಾಗಿದೆ ಎಂದವರು ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದ ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣದ ಕೊಡುಗೆ ಅನನ್ಯವಾಗಿದ್ದು ಮುಂದಿನ ಗಾಂಧಿ ಜಯಂತಿಯಂದು ಸ್ವಾತಂತ್ರ್ಯದ ಹೋರಾಟದ ಕೊಡುಗೆಯಾಗಿ ನಮ್ಮ ಸಮಾಜದ ಎಲ್ಲ ಸ್ತರದ ಸಂಘಟನೆಯ ಒಗ್ಗೂಡುವಿಕೆಯೊಂದಿಗೆ ವಿಪ್ರ ಸಂಗಮ ಹಾಗೂ ವಿಶಿಷ್ಟ ಕಾರ್ಯಕ್ರಮ ಹಾಗೂ ನಡಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕೇಂದ್ರ ಸರಕಾರವು ಸಂವಿಧಾನ ತಿದ್ದುಪಡಿ ಮೂಲಕ ಆರ್ಥಿಕವಾಗಿ ದುರ್ಬಲರಾದವರಿಗೆ ಮೀಸಲಾತಿ ಪ್ರಕಟಿಸಿದ್ದು ಈ ಮೀಸಲಾತಿಯ ಅನುಕೂಲತೆಗಳು ಇನ್ನು ಕೂಡ ಬ್ರಾಹ್ಮಣ ಸಮುದಾಯಕ್ಕೆ ಬಂದಿಲ್ಲ ಎಂದು ಖೇದ ವ್ಯಕ್ತಪಡಿಸಿದ ಅವರು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಜೊತೆಗೆ ಸಾಕಷ್ಟು ಚರ್ಚಿಸಿದರೂ ಫಲಪ್ರದವಾಗಿಲ್ಲ. ಈ ಬಗ್ಗೆ ಹೋರಾಟ ಆನಿವಾರ್ಯ ಎಂದರು.
ಮಹಾಧಿವೇಶನದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಅಂಗಸಂಸ್ಥೆಯ ಅಧ್ಯಕ್ಷ ಎಚ್.ಸತೀಶ್ ಹಂದೆ ಮಾತನಾಡಿ ಅಧೀವೇಶನ ಯಶಸ್ವಿಯಾಗಿಸಲು ಸಹಕರಿಸದ ಸರ್ವರನ್ನು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಕೂಟ ಮಹಾಜಗತ್ತು ಐಕ್ಯ ಮನೋಭಾವದಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ವೇ.ಮೂ ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ ದೀಪ ಪ್ರಜ್ವಲನೆಗೈದರು.
ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಅಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್.ಕಾರಂತ, ಸದಸ್ಯ ಪಿ.ಸದಾಶಿವ ಐತಾಳ್, ಕರ್ಣಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಮಾಜಿ ಅಧ್ಯಕ್ಷ ಜಯರಾಮ್ ಭಟ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್, ಕುಳಾಯಿ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಅನುವಂಶಿಕ ಅಡಳಿತ ಮೊಕ್ತೇಸರ ಕೃಷ್ಣ ಹೆಬ್ಬಾರ್, ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಅಡಳಿತ ಮೊಕ್ತೇಸರ ಐ.ರಮಾನಂದ ಭಟ್ ಇವರನ್ನು ಸನ್ಮಾನಿಸಲಾಯಿತು.
ಜ್ಯೋತಿಷಿ ಕೆ.ಸಿ ನಾಗೇಂದ್ರ ಭಾರಾಧ್ವಾಜ್, ಮುಕ್ಕ ಶ್ರೀ ಸತ್ಯಧರ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ ಐತಾಳ್, ಉದ್ಯಮಿ ರಘನಾಥ ಸೋಮಾಯಾಜಿ, ವಿಶ್ವೇಶ್ವರ ಬದವಿದೆ, ಕೇಂದ್ರ ಅಂಗ ಸಂಸ್ಥೆಯ ಉಪಾಧ್ಯಕ್ಷ ಇ.ಗೋಪಾಲಕೃಷ್ಣ ಹೇರಳೆ, ಬಿ.ಚಂದ್ರಶೇಖರ ಐತಾಳ್, ಎಸ್.ವಿ.ರಮೇಶ್ ರಾವ್, ಕೂಟ ಮಹಾಜಗತ್ತು ಕಾಟಿಪಳ್ಳ ಕೃಷ್ಣಾಪುರ ಅಂಗಸಂಸ್ಥೆಯ ಅಧ್ಯಕ್ಷ ಕೆ.ಶ್ಯಾಮ್ ಸುಂದರ್ ರಾವ್, ಮಹಿಳಾ ವೇದಿಕೆಯ ಅಧ್ಯಕ್ಷೆ ವಾಣಿ ಎಸ್. ಐತಾಳ್, ಪಿ.ಪುರುಷೋತ್ತಮ ರಾವ್, ಸಂತೋಷ್ ಐತಾಳ್, ಶಂಕರನಾರಾಯಣ ಮೈರ್ಪಾಡಿ, ಯಜ್ಞೇಶ ಐತಾಳ್ ಕುಳಾಯಿ, ರಾಘವೇಂದ್ರ ಹೆಬ್ಬಾರ್, ಸದಾಶಿವ ಕಾರಂತ್, ಪರಮೇಶ್ವರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.
ಯಮುನಾಪಿ ರಾವ್, ಜಯಂತಿ ಕಾರ್ಯಕ್ರಮ ನಿರೂಪಿಸಿದರು.
