ರಾಜ್ಯ ಮಟ್ಟದ ಕರಾಟೆ; ಮಂಗಳೂರಿನ ರೆಡ್ ಕ್ಯಾಮಲ್ ಸ್ಕೂಲ್ ಚಾಂಪಿಯನ್

ಮಂಗಳೂರು, ಸೆ. 19: ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್, ಎಂ.ಕೆ. ಅನಂತರಾಜ್ ಕಾಲೇಜು ಓಫ್ ಫಿಸಿಕಲ್ ಎಜುಕೇಶನ್ ಹಾಗೂ ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸೆಂಟರ್ ಜಂಟಿಯಾಗಿ ಆಯೋಜಿಸಿದ 19ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಮಂಗಳೂರಿನ ರೆಡ್ ಕ್ಯಾಮಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ 236 ಅಂಕದೊಂದಿಗೆ ಚಾಂಪಿಯನ್‌ಶಿಪ್ ಪಡೆದುಕೊಂಡಿತ್ತು.
ಅಡ್ಯಾರ್ ಕಣ್ಣೂರಿನ ಬರಕ ಇಂಟರ್ ನ್ಯಾಷನಲ್ ಸ್ಕೂಲ್ 112 ಅಂಕದೊಂದಿಗೆ ರನ್ನರ್ಸ್ ಚಾಂಪಿಯನ್‌ಶಿಪ್ ಪಡೆದುಕೊಂಡಿತು. ತೃತೀಯ ಸ್ಥಾನವನ್ನು ಮಂಗಳೂರಿನ ಪೀಸ್ ಪಬ್ಲಿಕ್ ಸ್ಕೂಲ್ ಪಡೆಯಿತು ಹಾಗೂ ಉತ್ತಮ ಪ್ರದರ್ಶನ ತಂಡವಾಗಿ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆ, ದಿ ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್ ಮಂಗಳೂರು, ಶೆಫರ್ಡ್ ಇಂಟರ್ ನ್ಯಾಷನಲ್ ಅಕಾಡಮಿ ಮಂಗಳೂರು, ದಾರುಲ್ ಐಮನ್ ಸ್ಕೂಲ್ ಮಂಗಳೂರು, ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೂಡುಬಿದಿರೆ, ದಿ ಯೆನೆಪೊಯ ಸ್ಕೂಲ್ ಮಂಗಳೂರು, ಬುರೂಜ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ಹಾಗೂ ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಮಂಗಳೂರು, ಎಕ್ಸಲೆಂಟ್ ಸ್ಕೂಲ್ ಮೂಡುಬಿದಿರೆ ಪಡೆಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ, ಉದ್ಯಮಿ, ಮೂಡುಬಿದಿರೆಯ ಅಬುಲ್ ಆಲಾ, ಮಾಡರ್ನ್ ಡೆಂಟಲ್ ಕ್ಲಿನಿಕ್ ಮಾಲಕ ಜಾವಿದ್ ಶೇಕ್, ಸಂಘಟಕದ ಅಧ್ಯಕ್ಷರಾದ ಸ್ವಾಮಿ ಪ್ರಸಾದ್, ಸಂಘಟಕ ಕಾರ್ಯದರ್ಶಿ ರಾಜೇಶ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನದೀಮ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಕೆ. ಅನಂತರಾಜ್ ಕಾಲೇಜು ಓಫ್ ಫಿಸಿಕಲ್ ಎಜುಕೇಶನ್ ಪ್ರಾಂಶುಪಾಲರಾದ ಧನಂಜಯ ಶೆಟ್ಟಿ ವಹಿಸಿದ್ದರು. ನವೀನ್ ಅಂಬುರಿ ಕಾರ್ಯಕ್ರಮ ನಿರೂಪಿಸಿದರು.