ಕುಂದಾಪುರದ ಕಬಡ್ಡಿ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ಕುಂದಾಪುರ, ಸೆ.19: ಇತ್ತೀಚೆಗೆ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ಕುಂದಾಪುರ ತಾಲೂಕು ಕಬಡ್ಡಿ ಪಂದ್ಯ ದಲ್ಲಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ಕಬಡ್ಡಿ ತಂಡದೊಂದಿಗೆ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ತಂಡದ ವ್ಯವಸ್ಥಾಪಕ ಕಾಳಾವರ ಉದಯ ಕುಮಾರ್ ಶೆಟ್ಟಿ, ಪೂರ್ಣಿಮಾ ಪಿ.ನಾಯಕ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ಚಂದ್ರ ಶೆಟ್ಟಿ ಮೆದಲಾದವರು ಉಪಸ್ಥಿತರಿದ್ದರು.
Next Story





