ಮಂಗಳೂರು: ಸೆ.20-21ರಂದು ವಿದ್ಯುತ್ ವ್ಯತ್ಯಯ

ಮಂಗಳೂರು, ಸೆ.19: ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಸೆ.20-21ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸೆ.20ರಂದು ಅಳಕೆ, ಕುದ್ರೋಳಿ, ನಡುಪಳ್ಳಿ, ಬಸವನ ಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶ ಮತ್ತು ಸೆ.21ರಂದು ಕಟೀಲು ದೇವಸ್ಥಾನ, ಪೆರಾರ, ಈಶ್ವರಕಟ್ಟೆ, ಕಳವಾರು, ಪೆರ್ಮುದೆ, ಬಜಪೆ ಟೌನ್, ಸುಂಕದಕಟ್ಟೆ, ಈಶ್ವರ ಕಟ್ಟೆ, ಮುರ, ಶಾಸ್ತಾವು, ಕಿನ್ನಿಕಂಬ್ಳ, ಮೂಡುಪೆರಾರ, ಕೊಳಪಿಲ, ಅರಿಕೆಪದವು, ಶಾಲೆಪದವು, ಕೊಂಪದವು, ಕರಿಕುಮೇರು, ಕಾಪಿಕಾಡು, ನೆಲ್ಲಿಗುಡ್ಡೆ, ಕಲ್ಪನೆ, ಈಶ್ವರಕಟ್ಟೆ, ಮುಂಡಬೆಟ್ಟು, ಬೆಂಗ್ಲೆ, ಕತ್ತಲ್ ಸಾರ್, ಸೌಹಾರ್ದನಗರ, ಸಿದ್ದಾರ್ಥ ನಗರ, ಜರಿನಗರ, ಅಂಬಿಕಾನಗರ, ಭಟ್ರಕೆರೆ, ಸ್ವಾಮಿಲಪದವು, ಹುಣ್ಸೆಕಟ್ಟೆ, ಕಳವಾರು, ಜೋಕಟ್ಟೆ, ಆಶ್ರಯ ಕಾಲನಿ, ಕೆಂಜಾರ್, ಎಚ್‌ಪಿಸಿಎಲ್ ಕಾಲನಿ, ಎಂಎಸ್‌ಇಝೆಡ್ ಕಾಲನಿ ಕೊಂಚಾರು, ಶಾಂತಿಗುಡ್ಡೆ, ಬಜಪೆ, ಕಿನ್ನಿಪದವು, ಬಿಪಿ ಕಾಂಪೌಂಡ್, ಅಡ್ಕಬಾರೆ, ಮರವೂರು ಡ್ಯಾಂ ವಾಟರ್ ಸಪ್ಲೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ಸೆ.22ರಂದು ನಗರದ ಲೇಡಿಗೋಶನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗ, ಜಿಎಚ್‌ಎಸ್ ರಸ್ತೆ, ಪಿಎಂ ರಾವ್ ರೋಡ್, ಗೌರಿಮಠ ರಸ್ತೆ, ರಾಘವೇಂದ್ರ ಮಠ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಬಿಜೈಯ ಭಾರತಿನಗರ, ಚಂದ್ರಿಕಾ ಬಡಾವಣೆ, ಕೊಡಿಯಾಲ್‌ಗುತ್ತು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.







