ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಮಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ನಿ) ನೌಕರರ ಸಹಕಾರ ಸಂಘ, ಅತ್ತಾವರ ಇದರ 56ನೇ ವಾರ್ಷಿಕ ಸಾಮಾನ್ಯ ಸಭೆಯು ಮೆಸ್ಕಾಂ ಕಚೇರಿಯ ಆವರಣದಲ್ಲಿ ನಡೆಯಿತು.
ಸಹಕಾರ ಸಂಘದ ಅಧ್ಯಕ್ಷ ಹರೀಶ್ ಸಭೆಯಲ್ಲಿ ಸಹಾಕರ ಸಂಘ ಬೆಳೆದು ಬಂದ ಹಾದಿಯನ್ನು ವಿವರಿಸಿದ ಅವರು ಪ್ರಸಕ್ತ ಆರ್ಥಿಕ ವರ್ಷ 2021-22 ರ ಸಾಲಿನಲ್ಲಿ ರೂ 25.72 ಕೋಟಿ ವ್ಯವಹಾರ ನಡೆಸಿ, 73.76 ಲಕ್ಷ ರೂ ಲಾಭ ಗಳಿಸಿದ್ದು, ಸಹಕಾರ ಸಂಘದ 1185 ಸದಸ್ಯರಿಗೆ ಷೇರು ಬಂಡವಾಳದ ಮೇಲೆ ಶೇ 9 ರಷ್ಟು ಲಾಭಾಂಶವನ್ನು ವಿತರಿಸಲಾಗುವುದೆಂದು ತಿಳಿಸಿದರು.
ಸಹಕಾರ ಸಂಘವು ಸದಸ್ಯರಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ 10.79 ಕೋಟಿ ದೀರ್ಘಾವಧಿ ಸಾಲ ಹಾಗೂ ರೂ 98,000.00 ಅಲ್ಪಾವಧಿ ಸಾಲ ನೀಡಿರುತ್ತದೆ. ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತಾನಂದ ಶೆಟ್ಟಿ ವರದಿ ಮಂಡಿಸಿದರು.
ಅಲ್ಲದೇ 2021-22 ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ, ಪಿ.ಯು.ಸಿ ಹಾಗೂ ಪದವಿ/ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 85 % ಮತ್ತು ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾದ ಸಹಕಾರಿ ಸಂಘದ ಸದಸ್ಯರ 27 ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಹ ಧನ ನೀಡಿ ಗೌರವಿಸಲಾಯಿತು.
ಸಹಕಾರಿ ಸಂಘದ ಉಪಾಧ್ಯಕ್ಷ ಕೆ. ರಾಜೇಂದ್ರಪ್ಪ, ನಿರ್ದೇಶಕರಾದ ಕೆ. ಕರುಣಾಕರ ಶೆಟ್ಟಿ, ಲೋಕೇಶ್ ಪೂಜಾರಿ, ಪುತ್ತು ಜೆ,. ಆಶಾ, ಎಚ್.ಎಸ್ ಗುರುಮೂರ್ತಿ, ಪರಮೇಶ್ವರ ಎನ್ ಹೆಗಡೆ, ಯೋಗಿಶ್ ಎಂ. ರಾಮಚಂದ್ರ ಎಂ., ಪುಷ್ಪರಾಜ್ ಕೆ., ಜಾನ್ ಬ್ಯಾಪಿಸ್ಟ್ ಡಿʼಸೋಜ್, ರಾಜೇಶ್ ಬಿ., ಹಾಗೂ ವನಿತಾ ಕೆ. ಉಪಸ್ಥಿತರಿದ್ದರು.
ಸಹಕಾರ ಸಂಘದ ಸದಸ್ಯರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಾಜರಾಗಿದ್ದು, ಸಂಘದ ಪ್ರಗತಿಗಾಗಿ ಹಾಗೂ ಮುಂಬರುವ ಕೆಲಸ ಕಾರ್ಯಗಳಿಗೆ ಸೂಕ್ತ ಸಲಹೆ ಸಹಕಾರಗಳನ್ನು ನೀಡಿದರು.