ಸಂಜಯ್ ರಾವುತ್ ನ್ಯಾಯಾಂಗ ಕಸ್ಟಡಿ ಅವಧಿ 14 ದಿನ ವಿಸ್ತರಣೆ

ಮುಂಬೈ,ಸೆ.19: ಇಲ್ಲಿಯ ವಿಶೇಷ ನ್ಯಾಯಾಲಯವು ಸೋಮವಾರ ಗೋರೆಗಾಂವ್‌ನ ಪತ್ರಾ ಚಾಳ ಪುನರಾಭಿವೃದ್ಧಿ ಯೋಜನೆಯಲ್ಲಿ ಹಣಕಾಸು ಅವ್ಯವಹಾರಗಳ ಆರೋಪದಲ್ಲಿ ಆ.1ರಂದು ಬಂಧಿಸಲ್ಪಟ್ಟಿರುವ ಶಿವಸೇನೆ ಸಂಸದ ಸಂಜಯ ರಾವುತ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನೂ 14 ದಿನಗಳ ಕಾಲ ವಿಸ್ತರಿಸಿದೆ. ಇದೇ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಅವರನ್ನು ಆರೋಪಿಯನ್ನಾಗಿ ಹೆಸರಿಸಿ ಜಾರಿ ನಿರ್ದೇಶನಾಲಯವು ಕಳೆದ ವಾರ ಸಲ್ಲಿಸಿದ್ದ ಪೂರಕ ದೋಷಾರೋಪ ಪಟ್ಟಿಯನ್ನು ಅದು ಗಮನಕ್ಕೆ ತೆಗೆದುಕೊಂಡಿದೆ.
ಜಾಮೀನು ಕೋರಿ ರಾವುತ್ ಅರ್ಜಿಯನ್ನು ಸಲ್ಲಿಸಿದ್ದರಾದರೂ ಪೂರಕ ದೋಷಾರೋಪ ಪಟ್ಟಿಯ ಅಧ್ಯಯನಕ್ಕೆ ಸಮಯಾವಕಾಶ ಅಗತ್ಯವಿದೆ ಎಂದು ಅವರ ಪರ ವಕೀಲರು ತಿಳಿಸಿದ ಬಳಿಕ ಅದರ ವಿಚಾರಣೆಯನ್ನು ನ್ಯಾಯಾಲಯವು ಸೆ.21ಕ್ಕೆ ಮುಂದೂಡಿತು.
Next Story





