ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಮಹಿಳೆಯಿಂದ 1.03 ಕೋ.ರೂ.ಮೌಲ್ಯದ ಡಾಲರ್‌ಗಳು ವಶ

ಕೋಲ್ಕತಾ,ಸೆ.19: ಇಲ್ಲಿಯ ನೇತಾಜಿ ಸುಭಾಷಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೋರ್ವರಿಂದ 1.03 ಕೋ.ರೂ.ಮೌಲ್ಯದ ಅಮೆರಿಕನ್ ಡಾಲರ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಸೋಮವಾರ ತಿಳಿಸಿದೆ.
ಸೆ.16ರಂದು ಸಂಗೀತಾ ದೇವಿ ಭಾರೀ ಮೊತ್ತದ ವಿದೇಶಿ ಕರೆನ್ಸಿಯನ್ನು ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿದ್ದ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಈ.ಡಿ.ಗೆ ಮಾಹಿತಿ ನೀಡಿದ್ದರು.
ತನ್ನ ಬಳಿಯಿದ್ದ ವಿದೇಶಿ ವಿನಿಮಯದ ಮೂಲ ಮತ್ತು ಇಷ್ಟೊಂದು ಭಾರೀ ಮೊತ್ತದೊಂದಿಗೆ ಪ್ರಯಾಣಿಸುವ ಉದ್ದೇಶವನ್ನು ವಿವರಿಸಲು ಸಂಗೀತಾ ದೇವಿ ವಿಫಲಗೊಂಡಿದ್ದರು. ಹೀಗಾಗಿ ಅವರ ಬಳಿಯಿದ್ದ 1.03 ಕೋ.ರೂ.ಮೌಲ್ಯದ ಅಮೆರಿಕನ್ ಡಾಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈ.ಡಿ.ತಿಳಿಸಿದೆ.
Next Story





