ಕೊಲೆ ಪ್ರಕರಣ: ಆರೋಪಿಗಳ ಖುಲಾಸೆ

ಮಂಗಳೂರು : ನಾಲ್ಕು ವರ್ಷದ ಹಿಂದೆ ಬೊಕ್ಕಪಟ್ಣ ಬೆಂಗರೆಯ ಮನೆಯೊಂದರಲ್ಲಿ ಮಲಗಿದ್ದ ತಣ್ಣೀರುಬಾವಿಯ ನಿವಾಸಿ ಶಿವರಾಜ ಕರ್ಕೇರಾ ಎಂಬಾತನನ್ನು ಕೊಲೆಗೈದ ಪ್ರಕರಣದ 11 ಮಂದಿ ಆರೋಪಿಗಳನ್ನು ದ.ಕ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿದೆ.
2018ರ ಜನವರಿ 22ರಂದು ಮುಂಜಾವ 4.30ಕ್ಕೆ ಮನೆಯೊಂದರ ಟೆರೇಸ್ ಮೇಲೆ ಶಿವರಾಜ ಕರ್ಕೇರಾ ಮಲಗಿರುವುದರ ಬಗ್ಗೆ ಮಾಹಿತಿ ಪಡೆದ ಅನೀಶ್, ವಿತರಾಜ್, ಸುನೀಲ್, ಮಲ್ಲೇಶ್, ಧೀರಜ್, ಜೀವನ್, ಸತೀಶ್, ವಿಕ್ರಂ, ಅಜಯ್, ಸುಮನ್, ಮನೋಜ್ ಎಂಬವರು ತಲವಾರು, ಕೊಡಲಿಯಿಂದ ಕೊಚ್ಚಿ ಕೊಂದಿರುವುದಾಗಿ ಆರೋಪಿಸಿ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು 37 ಸಾಕ್ಷಿಗಳ ವಿಚಾರಣೆಗೊಳಪಡಿಸಿತ್ತು. ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬಂದ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಆರೋಪಿಗಳ ಪರವಾಗಿ ವೇಣುಕುಮಾರ್, ಯುವರಾಜ್ ಕೆ. ಅಮೀನ್, ರಾಜೇಶ್ ಅಮ್ಟಾಡಿ, ವಿನಯಕುಮಾರ್, ಗಣೇಶ್ ವಾದಿಸಿದ್ದರು.





