Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಚೀನಾ ಆಕ್ರಮಣ ಮಾಡಿದರೆ ತೈವಾನ್ ರಕ್ಷಣೆಗೆ...

ಚೀನಾ ಆಕ್ರಮಣ ಮಾಡಿದರೆ ತೈವಾನ್ ರಕ್ಷಣೆಗೆ ನಾವಿದ್ದೇವೆ: ಬೈಡನ್ ಘೋಷಣೆ

ವಾರ್ತಾಭಾರತಿವಾರ್ತಾಭಾರತಿ19 Sept 2022 10:27 PM IST
share
ಚೀನಾ ಆಕ್ರಮಣ ಮಾಡಿದರೆ ತೈವಾನ್ ರಕ್ಷಣೆಗೆ ನಾವಿದ್ದೇವೆ: ಬೈಡನ್ ಘೋಷಣೆ

ವಾಷಿಂಗ್ಟನ್, ಸೆ.19: ಒಂದು ವೇಳೆ ಚೀನಾ ತೈವಾನ್ ಮೇಲೆ ಆಕ್ರಮಣ ಮಾಡಿದರೆ ಅಮೆರಿಕದ ಸೇನೆ ತೈವಾನ್‍ನ ರಕ್ಷಣೆಗೆ ಧಾವಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್  ಹೇಳಿದ್ದಾರೆ. ತೈವಾನ್ ವಿಷಯದಲ್ಲಿ ಬೈಡನ್ ಅವರ ಅತ್ಯಂತ ಸ್ಪಷ್ಟವಾದ ಹೇಳಿಕೆ ಇದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಹಕ್ಕು ಸಾಧಿಸುತ್ತಿರುವ ಪ್ರಜಾಸತ್ತಾತ್ಮಕ ಆಡಳಿತದ ತೈವಾನ್ ರಕ್ಷಣೆಗೆ ಅಮೆರಿಕ ನಿಲ್ಲಲಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೈಡನ್ ` ಹೌದು, ಖಂಡಿತ. ವಾಸ್ತವದಲ್ಲಿ ಅಸಾಮಾನ್ಯ ರೀತಿಯ ದಾಳಿ ನಡೆದರೆ ನಾವು ರಕ್ಷಣೆಗೆ ಧಾವಿಸಲಿದ್ದೇವೆ' ಎಂದರು. ಉಕ್ರೇನ್‍ಗಿಂತ ಭಿನ್ನವಾಗಿ, ಅಮೆರಿಕದ ಪಡೆಗಳು- ಅಮೆರಿಕದ ಪುರುಷರು ಮತ್ತು ಮಹಿಳೆಯರು- ಚೀನಾದ ಆಕ್ರಮಣದ ಸಂದರ್ಭದಲ್ಲಿ ತೈವಾನ್ ಅನ್ನು ರಕ್ಷಿಸುತ್ತದೆ ಎಂಬುದು ಈ ಹೇಳಿಕೆಯ ಅರ್ಥವೇ ಎಂಬ ಮತ್ತೊಂದು ಪ್ರಶ್ನೆಗೆ `ಹೌದು' ಎಂದು ಬೈಡನ್ ಉತ್ತರಿಸಿದರು.

ಏಕಚೀನಾ ನೀತಿಗೆ ಅಮೆರಿಕ ಬದ್ಧವಾಗಿದೆ ಎಂದು ಇದೇ ವೇಳೆ ಬೈಡನ್ ಪುನರುಚ್ಚರಿಸಿದರು.  ಅಮೆರಿಕವು ಅಧಿಕೃತವಾಗಿ ಚೀನಾಕ್ಕೆ ಮಾನ್ಯತೆ ನೀಡುತ್ತದೆ, ತೈವಾನ್‍ಗೆ ಅಲ್ಲ ಎಂಬುದು ಇದರರ್ಥ. ತೈವಾನೀಯರ ಸ್ವಾತಂತ್ರ್ಯವನ್ನು ಅಮೆರಿಕ ಪ್ರೋತ್ಸಾಹಿಸುತ್ತಿಲ್ಲ. ನಾವಾಗಿ ಯಾವ ಹೆಜ್ಜೆಯನ್ನೂ ಮುಂದಿರಿಸಿಲ್ಲ. ಅವರು ಸ್ವತಂತ್ರವಾಗಿರಲು ನಾವು ಪ್ರೋತ್ಸಾಹಿಸುತ್ತಿಲ್ಲ. ಅದು ಅವರ ನಿರ್ಧಾರ' ಎಂದು ಬೈಡನ್ ಹೇಳಿದರು.

ಈ ಹಿಂದೆಯೂ ಅಧ್ಯಕ್ಷರು ಇದನ್ನು ಹೇಳಿದ್ದರು. ಈ ವರ್ಷ ಟೋಕಿಯೋದಲ್ಲೂ ಈ ಮಾತನ್ನು ಪುನರುಚ್ಚರಿಸಿದ್ದಾರೆ. ಇದೇ ವೇಳೆ ನಮ್ಮ ತೈವಾನ್ ನೀತಿ ಬದಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಶ್ವೇತಭವನದ ವಕ್ತಾರರು ಹೇಳಿದ್ದಾರೆ.

ತೈವಾನ್ ವಿಷಯದಲ್ಲಿ ಅಮೆರಿಕ ದೀರ್ಘಕಾಲದಿಂದ `ಕಾರ್ಯತಂತ್ರದ ಅಸ್ಪಷ್ಟತೆ'ಯ ಕಾರ್ಯನೀತಿಗೆ ಅಂಟಿಕೊಂಡಿದೆ ಮತ್ತು ತೈವಾನ್ ಮೇಲೆ ಮಿಲಿಟರಿ ಆಕ್ರಮಣವಾದರೆ ಪ್ರತಿಕ್ರಿಯಿಸುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ತೈವಾನ್‍ನ ಭದ್ರತೆಗೆ ಸಂಬಂಧಿಸಿ ಅಮೆರಿಕದ ಅಚಲ ನಿರ್ಧಾರ ಪುನರುಚ್ಚರಿಸಿದ ಬೈಡನ್‍ಗೆ ಧನ್ಯವಾದಗಳು. ತೈವಾನ್ ತನ್ನ ಸ್ವರಕ್ಷಣೆ ಸಾಮಥ್ರ್ಯಗಳನ್ನು ಬಲಪಡಿಸುವುದನ್ನು ಮತ್ತು ಅಮೆರಿಕದೊಂದಿಗಿನ ನಿಕಟ ಭದ್ರತಾ ಪಾಲುದಾರಿಕೆಯನ್ನು ಮುಂದುವರಿಸಲಿದೆ ಎಂದು ತೈವಾನ್‍ನ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.

ಈ ರೀತಿಯ ವಾಗ್ದಾನ, ಪ್ರತಿಜ್ಞೆ ಮಾಡುವ ಮುನ್ನ , ವಾಗ್ದಾನ ಈಡೇರಿಸಲು ಸಾಧ್ಯವೇ ಎಂಬುದನ್ನು ಬೈಡನ್ ಖಾತರಿಪಡಿಸಬೇಕು. ವಾಕ್ಚಾತುರ್ಯದ ಪ್ರದರ್ಶನಕ್ಕೂ ಮೊದಲು ನೈಜ ಸಾಮಥ್ರ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಮೆರಿಕದ `ಜರ್ಮನ ಮಾರ್ಷಲ್ ಫಂಡ್'ನ ಏಶ್ಯಾ ತಜ್ಞೆ ಬೋನಿ ಗ್ಲೇಸರ್ ಹೇಳಿದ್ದಾರೆ.

ತೈವಾನ್ ವಿಷಯಕ್ಕೆ ಸಂಬಂಧಿಸಿದ ಕಾರ್ಯತಂತ್ರದ ಸ್ಪಷ್ಟತೆಯ ಯಾವುದೇ ಕ್ರಮವನ್ನು ಬೈಡನ್ ಅವರ ಏಶ್ಯಾ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಕರ್ಟ್ ಕ್ಯಾಂಪ್‍ಬೆಲ್ ಈ ಹಿಂದೆ ತಿರಸ್ಕರಿಸಿದ್ದು, ಇಂತಹ ವಿಧಾನಗಳಿಗೆ ಮಹತ್ವದ ಅಡ್ಡಿಗಳಿವೆ ಎಂದಿದ್ದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X