Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಕ್ಫ್ ಮಂಡಳಿ ಸದಸ್ಯರು ಅರೆ-ನ್ಯಾಯಾಂಗ...

ವಕ್ಫ್ ಮಂಡಳಿ ಸದಸ್ಯರು ಅರೆ-ನ್ಯಾಯಾಂಗ ಅಧಿಕಾರಿಗಳು, ಅವರ ನಿರ್ಧಾರಗಳಲ್ಲಿ ಧರ್ಮವು ಅಂಶವಾಗಿರುವುದಿಲ್ಲ: ಸುಪ್ರೀಂ

ವಾರ್ತಾಭಾರತಿವಾರ್ತಾಭಾರತಿ20 Sept 2022 8:04 PM IST
share
ವಕ್ಫ್ ಮಂಡಳಿ ಸದಸ್ಯರು ಅರೆ-ನ್ಯಾಯಾಂಗ ಅಧಿಕಾರಿಗಳು, ಅವರ ನಿರ್ಧಾರಗಳಲ್ಲಿ ಧರ್ಮವು ಅಂಶವಾಗಿರುವುದಿಲ್ಲ: ಸುಪ್ರೀಂ

ಹೊಸದಿಲ್ಲಿ,ಸೆ.20: ವಕ್ಫ್ ಮಂಡಳಿಗಳ(Waqf Board) ಸದಸ್ಯರು ಅರೆ-ನ್ಯಾಯಾಂಗ ಅಧಿಕಾರಿಗಳಾಗಿ ಶಾಸನಬದ್ಧ ಪಾತ್ರವನ್ನು ಹೊಂದಿದ್ದಾರೆ ಮತ್ತು ಮಂಡಳಿಯ ನಿರ್ಧಾರಗಳಲ್ಲಿ ಧರ್ಮವು ಒಂದು ಅಂಶವಾಗಿರುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು(Supreme Court) ಹೇಳಿದೆ.

ವಕ್ಫ್ ಮಂಡಳಿಗಳನ್ನು ‘ಶಾಸನಬದ್ಧ ಮಂಡಳಿಗಳು’ ಎಂದು ಬಣ್ಣಿಸಿದ ನ್ಯಾಯಾಲಯವು, ವಕ್ಫ್ ಮಂಡಳಿಗಳಿಗೆ ಸಂಬಂಧಿಸಿದಂತೆ ಧರ್ಮವನ್ನು ಕೇಂದ್ರೀಕರಿಸಿದ್ದ ಅರ್ಜಿದಾರರ ವಾದಗಳನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಮೌಖಿಕ ಅವಲೋಕನಗಳನ್ನು ನಡೆಸಿತು.

ಅರ್ಜಿದಾರರಾದ ವಕೀಲ ಹಾಗೂ ಬಿಜೆಪಿ(BJP) ನಾಯಕ ಅಶ್ವಿನಿ ಉಪಾಧ್ಯಾಯ ಅವರು,ವಕ್ಫ್ ಕಾಯ್ದೆಯನ್ನು(Waqf Act) ಪ್ರಶ್ನಿಸಿರುವ ಎಲ್ಲ ಅರ್ಜಿಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿದ್ದರು.

ನಿರ್ದಿಷ್ಟವಾಗಿ ಅರ್ಜಿದಾರರು ವಕ್ಫ್ ಮಂಡಳಿಗಳ ಸದಸ್ಯರು ಇಸ್ಲಾಮ್(Islam) ಧರ್ಮದ ಅನುಯಾಯಿಗಳಾಗಿರುವುದನ್ನು ಕಡ್ಡಾಯಗೊಳಿಸಿರುವ ವಕ್ಫ್ ಕಾಯ್ದೆಯ ಕೆಲವು ನಿಬಂಧನೆಗಳನ್ನು ಆಕ್ಷೇಪಿಸಿದ್ದರು. ಅರ್ಜಿದಾರರ ಪರ ವಕೀಲ ರಣಜಿತ್ ಕುಮಾರ್ ಅವರ ವಾದವನ್ನು ತೀವ್ರ ತರಾಟೆಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಹೃಷಿಕೇಶ ರಾಯ್ ಅವರ ಪೀಠವು,ಈ ಮಂಡಳಿಗಳು ಶಾಸನಬದ್ಧವಾಗಿದ್ದು, ಅವುಗಳ ನಿರ್ಧಾರಗಳಲ್ಲಿ ಧರ್ಮದ ಪಾತ್ರವಿಲ್ಲ ಎಂದು ಒತ್ತಿ ಹೇಳಿತು.

‘ನ್ಯಾಯಮಂಡಳಿಗೆ ನ್ಯಾಯಾಂಗ ಸದಸ್ಯರೋರ್ವರು ನೇಮಕಗೊಂಡರೆ ಅವರು ಧರ್ಮದ ಆಧಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನೀವು ಹೇಳಿದರೆ ನಾವು ಆಘಾತವನ್ನು ವ್ಯಕ್ತಪಡಿಸಲೇಬೇಕು. ರಣಜಿತ್ ಕುಮಾರ್, ನೀವು ಇದನ್ನು ನಿಜವಾಗಿ ಹೇಳುತ್ತಿದ್ದೀರಾ? ನಾವು ಧರ್ಮವನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆಯೇ’ ಎಂದು ಪೀಠವು ಪ್ರಶ್ನಿಸಿತು.

ವಕ್ಫ್ ಆಸ್ತಿಗಳನ್ನು ರಕ್ಷಿಸುವ ಸೋಗಿನಲ್ಲಿರುವ ಈ ಕಾಯ್ದೆಯು ವಾಸ್ತವದಲ್ಲಿ ಧಾರ್ಮಿಕ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ವಾದಿಸಿದ್ದ ಅರ್ಜಿದಾರರು, ಹಿಂದು, ಬೌದ್ಧ ಮತ್ತು ಇತರ ಧರ್ಮಗಳ ಅನುಯಾಯಿಗಳು ತಮ್ಮ ಪ್ರಯೋಜನಕ್ಕಾಗಿ ಇಂತಹ ಯಾವುದೇ ಕಾನೂನನ್ನು ಹೊಂದಿಲ್ಲ. ಹೀಗಾಗಿ ವಕ್ಫ್ ಕಾಯ್ದೆಯು ಜಾತ್ಯತೀತತೆ, ದೇಶದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ವೋಚ್ಚ ನ್ಯಾಯಾಲಯವು, ಒಡಿಶಾ, ಮಧ್ಯಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ಈ ಎಲ್ಲ ಕಾಯ್ದೆಗಳಲ್ಲಿ ಮಂಡಳಿಯ ಸದಸ್ಯರು ಹಿಂದು ಧರ್ಮಕ್ಕೆ ಸೇರಿರಬೇಕು ಎಂಬ ನಿಬಂಧನೆಯಿದೆ ಎಂದು ಹೇಳಿತು. ರಾಜ್ಯದಲ್ಲಿಯ ಹಿಂದು ಟ್ರಸ್ಟ್‌ಗಳ ‘ಅಧಿಕಾರಿಗಳು’ ಹಿಂದು ಧರ್ಮದವರಾಗಿರಬೇಕು ಎಂದು ಕಡ್ಡಾಯಗೊಳಿಸಿರುವ ಒಡಿಶಾ ಹಿಂದು ಧಾರ್ಮಿಕ ದತ್ತಿಗಳ ಕಾಯ್ದೆ, 1952ರ ಕಲಂ 5ನ್ನು ಅದು ಉದಾಹರಣೆಯಾಗಿ ಬೆಟ್ಟು ಮಾಡಿತು.

ಪೀಠದ ಪ್ರಶ್ನೆಗಳಿಗೆ ಉತ್ತರಗಳನ್ನು ಸಲ್ಲಿಸಲು ತನಗೆ ಸಮಯಾವಕಾಶ ಅಗತ್ಯವಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ, ನ್ಯಾಯಾಲಯವು ಅ.10ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X