Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯುಪಿಎಗೆ ಹೋಲಿಸಿದರೆ ಎನ್‌ಡಿಎ...

ಯುಪಿಎಗೆ ಹೋಲಿಸಿದರೆ ಎನ್‌ಡಿಎ ಆಡಳಿತದಲ್ಲಿ ಸಿಬಿಐ ಬಲೆಗೆ ಬಿದ್ದ ಪ್ರತಿಪಕ್ಷ ನಾಯಕರ ಸಂಖ್ಯೆ ಹೆಚ್ಚು: ವರದಿ

ವಾರ್ತಾಭಾರತಿವಾರ್ತಾಭಾರತಿ20 Sept 2022 8:22 PM IST
share
ಯುಪಿಎಗೆ ಹೋಲಿಸಿದರೆ ಎನ್‌ಡಿಎ ಆಡಳಿತದಲ್ಲಿ ಸಿಬಿಐ ಬಲೆಗೆ ಬಿದ್ದ ಪ್ರತಿಪಕ್ಷ ನಾಯಕರ ಸಂಖ್ಯೆ ಹೆಚ್ಚು: ವರದಿ

ಹೊಸದಿಲ್ಲಿ: ಯುಪಿಎ(UPA) ಮತ್ತು ಎನ್‌ಡಿಎ(NDA)ದ ಕಳೆದ 18 ವರ್ಷಗಳ ಆಡಳಿತಗಳಲ್ಲಿ ಸಿಬಿಐ(CBI) ಕೆಂಗಣ್ಣಿಗೆ ಗುರಿಯಾದ ಸುಮಾರು 200ರಷ್ಟು ಪ್ರಮುಖ ರಾಜಕಾರಣಿಗಳಲ್ಲಿ ಶೇ.80ಕ್ಕೂ ಅಧಿಕ ನಾಯಕರು ಪ್ರತಿಪಕ್ಷಗಳಿಗೆ ಸೇರಿದವರಾಗಿದ್ದಾರೆ. 2014ರಲ್ಲಿ ಎನ್‌ಡಿಎ II ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರವೃತ್ತಿಯು ಇನ್ನಷ್ಟು ಹೆಚ್ಚಾಗಿದೆ ಎನ್ನುವುದನ್ನು indianexpress.com ಕೈಗೊಂಡ ವಿಶ್ಲೇಷಣೆಯು ಬೆಳಕಿಗೆ ತಂದಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ 10 ವರ್ಷಗಳ (2004-2014) ಆಡಳಿತದಲ್ಲಿ ಕನಿಷ್ಠ 72 ರಾಜಕೀಯ ನಾಯಕರು ಸಿಬಿಐ ನಿಗಾದಲ್ಲಿದ್ದು, ಈ ಪೈಕಿ 43 (ಶೇ.60)ನಾಯಕರು ಪ್ರತಿಪಕ್ಷಗಳಿಗೆ ಸೇರಿದವರಾಗಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ II ಸರಕಾರದ ಈವರೆಗಿನ ಎಂಟು ವರ್ಷಗಳ ಆಡಳಿತದಲ್ಲಿ ಪ್ರತಿಪಕ್ಷಗಳ ರಾಜಕೀಯ ಹೆಜ್ಜೆಗುರುತುಗಳು ಕ್ಷೀಣಿಸಿದ್ದರೂ ಸಿಬಿಐ ತನಿಖೆಗಳನ್ನು ಎದುರಿಸಿರುವ ಕನಿಷ್ಠ 124 ಪ್ರಮುಖ ನಾಯಕರ ಪೈಕಿ 118 (ಶೇ.95) ಜನರು ಪ್ರತಿಪಕ್ಷಗಳಿಗೆ ಸೇರಿದವರಾಗಿದ್ದಾರೆ. ಕಳೆದ 18 ವರ್ಷಗಳಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟ, ದಾಳಿಗೊಳಗಾದ ಅಥವಾ ಪ್ರಶ್ನಿಸಲ್ಪಟ್ಟ ರಾಜಕೀಯ ನಾಯಕರಲ್ಲಿ 72 ಜನರು ಯುಪಿಎಗೆ ಮತ್ತು 124 ಜನರು ಎನ್‌ಡಿಎಗೆ ಸೇರಿದವರಾಗಿದ್ದಾರೆ ಎಂದು  indianexpress.com ವರದಿ ಮಾಡಿದೆ.

ಯುಪಿಎ ಆಡಳಿತವು 2ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಡಿದು ಕಲ್ಲಿದ್ದಲು ಗಣಿ ಹಂಚಿಕೆ ಪ್ರಕರಣಗಳವರೆಗೆ ಹಗರಣಗಳ ಸುಳಿಯಲ್ಲಿ ಸಿಲುಕಿದ್ದು, 2004-2009ರ ಅವಧಿಯಲ್ಲಿ ಸಿಬಿಐ ತನಿಖೆಗೊಳಪಟ್ಟಿದ್ದ 72 ಪ್ರಮುಖ ನಾಯಕರ ಪೈಕಿ 29 ನಾಯಕರು ಕಾಂಗ್ರೆಸ್ ಅಥವಾ ಡಿಎಂಕೆಯಂತಹ ಅದರ ಮಿತ್ರಪಕ್ಷಗಳಿಗೆ ಸೇರಿದವರಾಗಿದ್ದರು. ಎನ್‌ಡಿಎ- II ಆಡಳಿತದಲ್ಲಿ ಕೇವಲ ಆರು ಬಿಜೆಪಿ ನಾಯಕರು ಸಿಬಿಐ ತನಿಖೆಗೊಳಗಾಗಿದ್ದಾರೆ.

ಯುಪಿಎ ಆಡಳಿತದಲ್ಲಿ ಸಿಬಿಐ ತನಿಖೆಗೊಳಪಟ್ಟಿದ್ದ 43 ಪ್ರತಿಪಕ್ಷ ನಾಯಕರ ಪೈಕಿ ತನ್ನ 12 ನಾಯಕರೊಂದಿಗೆ ಬಿಜೆಪಿ ಅತ್ಯಂತ ಹೆಚ್ಚಿನ ಪಾಲನ್ನು ಹೊಂದಿತ್ತು. ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ, ಗಾಲಿ ಜನಾರ್ಧನ ರೆಡ್ಡಿ, ಪ್ರಮೋದ್ ಮಹಾಜನ್ ಮತ್ತು ಮಿತ್ರಪಕ್ಷದ ಜಾರ್ಜ್ ಫೆರ್ನಾಂಡಿಸ್‌ರಂತಹ ನಾಯಕರು ಸಿಬಿಐ ತನಿಖೆಗೊಳಗಾಗಿದ್ದರು.

ಇದನ್ನೂ ಓದಿ: ವಕ್ಫ್ ಮಂಡಳಿ ಸದಸ್ಯರು ಅರೆ-ನ್ಯಾಯಾಂಗ ಅಧಿಕಾರಿಗಳು, ಅವರ ನಿರ್ಧಾರಗಳಲ್ಲಿ ಧರ್ಮವು ಅಂಶವಾಗಿರುವುದಿಲ್ಲ: ಸುಪ್ರೀಂ

2014ರಲ್ಲಿ ಎನ್‌ಡಿಎ- II ಆಡಳಿತ ಆರಂಭಗೊಂಡ ಬಳಿಕ ರಾಜಕೀಯ ನಾಯಕರ ವಿರುದ್ಧ ಸಿಬಿಐ ತನಿಖೆ ವೇಗವನ್ನು ಪಡೆದುಕೊಂಡಿದೆ. ತನಿಖೆಗೊಳಗಾದ 118 ಪ್ರಮುಖ ಪ್ರತಿಪಕ್ಷ ನಾಯಕರ ಪಟ್ಟಿಯಲ್ಲಿ ಟಿಎಂಸಿ (30) ಮತ್ತು ಕಾಂಗ್ರೆಸ್ (26) ಅಗ್ರಸ್ಥಾನಗಳಲ್ಲಿವೆ. ಅಲ್ಲದೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಅಶೋಕ್ ಗೆಹ್ಲೋಟ್, ಕಮಲನಾಥ್, ಅಮರಿಂದರ್ ಸಿಂಗ್ ಮತ್ತಿತರರ ನಿಕಟ ಸಂಬಂಧಿಗಳನ್ನೂ ಸಿಬಿಐ ವಿಚಾರಣೆಗೊಳಪಡಿಸಿದೆ.

ಆರ್‌ಜೆಡಿ ಮತ್ತು ಬಿಜೆಡಿಯ ತಲಾ 10, ವೈಎಸ್‌ಆರ್ ಕಾಂಗ್ರೆಸ್‌ನ 6, ಬಿಎಸ್‌ಪಿ ಮತ್ತು ಟಿಡಿಪಿಯ ತಲಾ 5, ಆಪ್, ಎಸ್‌ಪಿ, ಎಐಎಡಿಎಂಕೆ ಮತ್ತು ಸಿಪಿಎಮ್‌ನ ತಲಾ 4, ಎನ್‌ಸಿ ಮತ್ತು ಡಿಎಂಕೆಯ ತಲಾ ಇಬ್ಬರು ಹಾಗೂ ಪಿಡಿಪಿ, ಟಿಆರ್‌ಎಸ್‌ನ ತಲಾ ಓರ್ವರು ಮತ್ತು ಓರ್ವ ಪಕ್ಷೇತರ ನಾಯಕರು ಈ ಪಟ್ಟಿಯಲ್ಲಿದ್ದಾರೆ.

ಯುಪಿಎ ಮತ್ತು ಎನ್‌ಡಿಎ- II ಆಡಳಿತದಡಿ ಈ ಮೈತ್ರಿಕೂಟಗಳಿಂದ ಹೊರಬಿದ್ದವರ ಮೇಲೆ ಸಿಬಿಐ ದಾಳಿಗಳ ಸಮಯವೂ ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕರಿಂದ ಪದೇ ಪದೇ ಎತ್ತಲ್ಪಟ್ಟಿದೆ, ಪ್ರತಿಭಟನೆಗಳೂ ನಡೆದಿವೆ.

ಎನ್‌ಡಿಎ- II  ಅಡಿ ಸಿಬಿಐ ಹಾಲಿ ಆಡಳಿತ ವ್ಯವಸ್ಥೆಯ ಹಿರಿಯ ನಾಯಕರ ವಿರುದ್ಧದ ಹಿಂದಿನ ಪ್ರಕರಣಗಳ ಬಗ್ಗೆ ಮೃದು ನಿಲುವು ತಳೆಯುತ್ತಿದೆ ಎಂಬ ಆರೋಪಕ್ಕೂ ಗುರಿಯಾಗಿದೆ. ಸೊಹ್ರಾಬುದ್ದೀನ್ ಶೇಖ್ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದಿಂದ ಅಮಿತ್ ಶಾ ಖುಲಾಸೆಯ ವಿರುದ್ಧ ಸಿಬಿಐ ಮೇಲ್ಮನವಿಯನ್ನು ಸಲ್ಲಿಸಿರಲಿಲ್ಲ. ಕಾಂಗ್ರೆಸ್ ನಾಯಕರಾಗಿದ್ದಾಗ ಶಾರದಾ ಚಿಟ್‌ಫಂಡ್ ಹಗರಣದಲ್ಲಿ ವಿಚಾರಣೆಯನ್ನು ಎದುರಿಸಿದ್ದ ಅಸ್ಸಾಮಿನ ಹಿಮಂತ್ ಬಿಸ್ವ ಶರ್ಮಾ ಅವರು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸಿಬಿಐ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಶರ್ಮಾ ಈಗ ಅಸ್ಸಾಮಿನ ಮುಖ್ಯಮಂತ್ರಿಯಾಗಿದ್ದು, ಈಶಾನ್ಯ ಭಾರತದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿದ್ದಾರೆ. ಸಿಬಿಐ ಅಧಿಕಾರಿಯೋರ್ವರು ಸಂಸ್ಥೆಯು ನಿರ್ದಿಷ್ಟವಾಗಿ ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಳ್ಳುತ್ತಿದೆ ಎನ್ನುವುದನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಐಎಎಸ್ ಅಧಿಕಾರಿಯಾಗಿ ಮರುನೇಮಕಾತಿ ಬಳಿಕ ಆರ್ಟಿಕಲ್ 370 ವಿರುದ್ಧದ ಅರ್ಜಿ ಹಿಂಪಡೆದ ಶಾ ಫೈಸಲ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X