ವೈಮಾನಿಕ ಸ್ಪರ್ಧೆಯಲ್ಲಿ ವಿಮಾನ ಅಪಘಾತ : ಪೈಲಟ್ ಸಾವು
photo :twetter
ವಾಷಿಂಗ್ಟನ್, ಸೆ.20: ಅಮೆರಿಕದ ನೆವಾಡದಲ್ಲಿ ನಡೆದ ವಾರ್ಷಿಕ ವೈಮಾನಿಕ ಸ್ಪರ್ಧೆಯ ಸಂದರ್ಭ ನಡೆದ ವಿಮಾನ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ದುರಂತದ ವೀಡಿಯೊ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ. ರೆನೊ ರೇಸ್ ವೈಮಾನಿಕ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿಮಾನ ಏಕಾಏಕಿ ನೆಲಕ್ಕೆ ಅಪ್ಪಳಿಸಿದ್ದು ವಿಮಾನ ಬೆಂಕಿಯ ಚೆಂಡಿನಂತಾಗಿದೆ. ಬಳಿಕ ಹಲವು ಸುತ್ತು ಉರುಳಿಬಿದ್ದಿದೆ. ಅಪಘಾತದಲ್ಲಿ ಪೈಲಟ್ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಅಪಘಾತದ ಬಳಿಕ ಇತರ ವಿಮಾನಗಳಿಗೂ ಭೂಸ್ಪರ್ಷ ಮಾಡುವಂತೆ ಸೂಚಿಸಲಾಗಿದ್ದು ಮುಂದಿನ ಹಂತದ ಸ್ಪರ್ಧೆಯನ್ನು ರದ್ದುಗೊಳಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸ್ಪರ್ಧೆಯ ಸಂಘಟಕರನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
Pilot killed in single-engine plane crash at Reno Air Races.
— JohnZ (@y123_john) September 20, 2022
"The FAA and the National Transportation Safety Board will investigate".
All other pilots landed safely and race operations for 2022 have been suspended. pic.twitter.com/RGF2GDjyU0