ರಾಹುಲ್ ಗಾಂಧಿ ಯಾತ್ರೆ ಗುಜರಾತಿನಿಂದ ಆರಂಭವಾಗಬೇಕಿತ್ತು: ಪ್ರಶಾಂತ್ ಕಿಶೋರ್

ನಾಗ್ಪುರ,ಸೆ.20: ಕಾಂಗ್ರೆಸ್‌ನ ‘ಭಾರತ ಜೋಡೋ ಯಾತ್ರೆ ’ಯು ಈ ವರ್ಷ ಚುನಾವಣೆಗಳು ನಡೆಯಲಿರುವ ಗುಜರಾತಿನಿಂದ ಅಥವಾ ಉ.ಪ್ರದೇಶ ಮತ್ತು ಮಧ್ಯಪ್ರದೇಶದಂತಹ ಇತರ ಬಿಜೆಪಿ ಆಡಳಿತದ ರಾಜ್ಯದಿಂದ ಆರಂಭವಾಗಬೇಕಿತ್ತು ಎಂದು ಮಾಜಿ ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ ಅವರು ಮಂಗಳವಾರ ಇಲ್ಲಿ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ಹೋರಾಟವನ್ನು ಬೆಂಬಲಿಸಿ ಸ್ಥಳೀಯ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ತಮಿಳುನಾಡಿನಿಂದ ಆರಂಭಗೊಂಡಿತ್ತು.
Next Story





