ಯಾರನ್ನಾದರೂ ನಿಧಾನವಾಗಿ ಕೊಲ್ಲುವಂತಿದೆ: ಟಿವಿಯಲ್ಲಿ ದ್ವೇಷ ಭಾಷಣಗಳ ಕುರಿತು ಸುಪ್ರೀಂ ಕೋರ್ಟ್
ನಿರೂಪಕರ ಕರ್ತವ್ಯದ ಬಗ್ಗೆ ನ್ಯಾಯಾಲಯ ಹೇಳಿದ್ದೇನು?

ಹೊಸದಿಲ್ಲಿ: ದ್ವೇಷಕಾರಕ ಮಾತುಗಳ ಕುರಿತಂತೆ ಇಂದು ಟಿವಿ ವಾಹಿನಿಗಳ(TV channels) ವಿರುದ್ಧ ಕಿಡಿಕಾರಿದ ಸುಪ್ರೀಂ ಕೋರ್ಟ್(Supreme Court) ಅದೇ ಸಮಯ 'ನಿರೂಪಕರ (Anchor) ಪಾತ್ರ' ಬಹಳ ಮುಖ್ಯ ಎಂದು ಹೇಳಿದೆ.
ʻʻಮುಖ್ಯವಾಹಿನಿ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಈ ಭಾಷಣಗಳು ಅನಿಯಂತ್ರಿತವಾಗಿವೆ. ದ್ವೇಷದ ಭಾಷಣಗಳನ್ನು ಯಾರಾದರೂ ಆರಂಭಿಸಿದಾಕ್ಷಣ ಅದು ಮುಂದುವರಿಯದಂತೆ ನೋಡಿಕೊಳ್ಳುವುದು ನಿರೂಪಕರ ಕರ್ತವ್ಯ. ಮಾಧ್ಯಮ ಸ್ವಾತಂತ್ರ್ಯವು ಮುಖ್ಯವಾಗಿದೆ.... ನಮ್ಮದು ಅಮೆರಿಕಾದಷ್ಟು ಸ್ವತಂತ್ರವಾಗಿಲ್ಲ ಆದರೆ ಎಲ್ಲಿ ಗೆರೆಯನ್ನು ಎಳೆಯಬೇಕೆಂಬುದು ನಮಗೆ ತಿಳಿದಿರಬೇಕು,ʼʼ ಎಂದು ಕಳೆದ ವರ್ಷದಿಂದ ವರದಿಯಾದ ದ್ವೇಷದ ಭಾಷಣಗಳ ಕುರಿತಾದ ಹಲವು ಅರ್ಜಿಗಳ ವಿಚಾರಣೆ ವೇಳೆ ಜಸ್ಟಿಸ್ ಕೆ ಎಂ ಜೋಸೆಫ್ ಹೇಳಿದರು.
"ದ್ವೇಷದ ಮಾತುಗಳು ಪದರಗಳಿಂದ ಕೂಡಿವೆ... ಯಾರನ್ನಾದರೂ ಕೊಲ್ಲುವಂತೆ, ಅದನ್ನು ಹಲವು ವಿಧಗಳಲ್ಲಿ ನೀವು ಮಾಡಬಹುದು. ನಿಧಾನವಾಗಿ ಅಥವಾ ಬೇರೆ ವಿಧದಲ್ಲಿ. ಕೆಲವೊಂದು ಕಾರಣಗಳಿಗಾಗಿ ಇವುಗಳು ನಮ್ಮ ಗಮನ ಪಡೆಯುತ್ತವೆ,ʼʼ ಎಂದು ದ್ವೇಷದ ಭಾಷಣಗಳು ವೀಕ್ಷಕರಿಗೆ ಏಕೆ ಆಸಕ್ತಿ ಮೂಡಿಸುತ್ತವೆ ಎಂದು ನ್ಯಾಯಾಲಯ ವಿವರಿಸಿದೆ.
"ಸರಕಾರ ವೈರುಧ್ಯದ ನಿಲುವು ತಳೆಯಬಾರದು ಬದಲು ನ್ಯಾಯಾಲಯಕ್ಕೆ ಸಹಕರಿಸಬೇಕು, ಇದು ಸಣ್ಣ ವಿಚಾರವೇ?ʼʼ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಮುಂದಿನ ವಿಚಾರಣೆ ನವೆಂಬರ್ 23ಕ್ಕೆ ನಿಗದಿಯಾಗಿದೆ. ದ್ವೇಷದ ಭಾಷಣಗಳ ಕುರಿತಂತೆ ಕಾನೂನು ಆಯೋಗದ ಶಿಫಾರಸುಗಳ ಕುರಿತಂತೆ ಕ್ರಮ ಕೈಗೊಳ್ಳುವ ಉದ್ದೇಶವಿದೆಯೇ ಎಂದು ಸರಕಾರ ಆ ದಿನಾಂಕದೊಳಗೆ ಸ್ಪಷ್ಟಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಶಿಕ್ಷಕ, ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ







