ಉಡುಪಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಬೀದಿದೀಪಗಳೇ ಇಲ್ಲ!

ಉಡುಪಿ, ಸೆ.21: ಮಣಿಪಾಲದಿಂದ ಜಿಲ್ಲಾಧಿಕಾರಿ ಕಛೇರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಬೀದಿ ದೀಪ ಗಳಿಲ್ಲದೆ, ರಾತ್ರಿಯ ಸಮಯದಲ್ಲಿ ಸಾರ್ವ ಜನಿಕರು ಸಂಚರಿಸಲು ಭಯ ಪಡಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಪ್ರದೇಶದಲ್ಲಿ ದರೋಡೆ, ಅತ್ಯಾಚಾರ, ಮಾದಕ ದ್ರವ್ಯಗಳ ಮಾರಟ ಮೊದಲಾದ ಅಹಿತಕರ ಘಟನೆಗಳು ನಡೆಯಲು ಸಾಧ್ಯತೆ ಇದೆ. ನಗರಾಡಳಿತ ತಕ್ಷಣ ಜಿಲ್ಲಾಡಳಿತ ಕಛೇರಿಗೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಬೀದಿ ದೀಪ ಅಳವಡಿಸಬೇಕೆಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
Next Story





