ಸ್ವಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆಯೊಂದಿಗೆ ಸದೃಢ ಸಮಾಜ ನಿರ್ಮಾಣ ಸಾಧ್ಯ: ಡಿಸಿ ಡಾ.ರಾಜೇಂದ್ರ

ಮಂಗಳೂರು: ಆರ್ಥಿಕ ಸ್ವಾವಲಂಬನೆ ಸಾಧಿಸಲು ಸ್ವ ಉದ್ಯೋಗವನ್ನು ಸೂಕ್ತವಾದ ಮಾಹಿತಿ ಯೊಂದಿಗೆ ಮಾಡುವುದರಿಂದ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೋಟಗಾರಿಕಾ ಇಲಾಖೆ, ಮೀನು ಗಾರಿಕಾ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ಮಾಹಿತಿ ಶಿಬಿರವನ್ನು ನಗರದ ಬೆಂದೂರ್ ವೆಲ್ ನಲ್ಲಿರುವ ತೋಟಗಾರಿಕಾ ಇಲಾಖೆಯ ಸಭಾಂಗಣದಲ್ಲಿಂದು ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಪರಿಸರದಲ್ಲಿ ಲಭ್ಯ ವಿರುವ ಸಂಪ ನ್ಮೂಲ ಗಳನ್ನು ಬಳಸಿಕೊಂಡು ಸ್ವ ಉ ದ್ಯೋಗ ವನ್ನು ಕೈ ಗೊಂಡು ವೈಯಕ್ತಿಕ ಆಧಾಯ ಹೆಚ್ಚು ಮಾಡಿಕೊಂಡು.ಆರ್ಥಿಕ ವಾಗಿ ಸದೃಢ ತೆಯನ್ನು ಸಾಧಿಸಬಹುದು. ಕೋವಿಡ್ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಆಗಿರುವ ಆರ್ಥಿಕ ಹೊಡೆತ ದಿಂದ ಕಷ್ಟ ನಷ್ಟ ಅನುಭವಿಸಿದವರಿಗೆ ವಿವಿಧ ಕ್ಷೇತ್ರದಲ್ಲಿ ಸ್ವ ಉದ್ಯೋಗ ಕೈ ಗೊಳ್ಳಲು ಪತ್ರ ಕರ್ತರಿಗೆ ಹಾಗೂ ಅವರ ಕುಟುಂಬದ ಸದಸ್ಯ ರಿಗೆ ಮಾಹಿತಿ ಶಿಬಿರ ವನ್ನು ಹಮ್ಮಿಕೊಂಡಿ ರುವುದು ಮಾದರಿಯಾಗಿದೆ ಎಂದು ಡಾ.ರಾಜೇಂದ್ರ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡುತ್ತಾ,ಸ್ವ ಉದ್ಯೋಗ ಮಾಡಲು ಮೊದಲು ಆಸಕ್ತಿ ಮುಖ್ಯ. ಜೊತೆಗೆ ಆ ಕ್ಷೇತ್ರದ ಮಾಹಿತಿ ಕೌಶಲ್ಯ ಸರಕಾರದ ಸಹಾಯವನ್ನು ಪಡೆದು ಕೊಂಡು ಆರ್ಥಿಕ ಸ್ವಾವಲಂಬನೆ ಯನ್ನು ಸಾಧಿಸಬಹುದು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಸ್ತಾವಿಕವಾಗಿ ಮಾತನಾಡಿದ ರು.
ಸಮಾರಂಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್ ಆರ್.ನಾಯ್ಕ್ , ದ.ಕ ಪಶು ಸಂಗೋಪನಾ ಇಲಾಖಾ ಉಪನಿ ರ್ದೇಶಕ ಡಾ.ಪ್ರಸನ್ನ ಕುಮಾರ್, ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜೀತೇ0ದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್.ಕಾರ್ಯಕ್ರಮ ನಿರೂಪಿಸಿದರು.ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆಯ ಪಾಲಿಸಿಯನ್ನು ರೈತರಿಗೆ ಮತ್ತು ತರಕಾರಿ ಗಿಡಗಳನ್ನು ಪತ್ರಕರ್ತರಿಗೆ ಸಾಂಕೇತಿಕವಾಗಿ ಅತಿಥಿಗಳು ವಿತರಿಸಿದರು.
ಪತ್ರಕರ್ತರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿ ಗಳಿಂದ ಜೇನು ಕೃಷಿ, ಅಣಬೆ ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ , ಮೀನುಗಾ ರಿಕೆ ಬಗ್ಗೆ ಮಾಹಿತಿ ಶಿಬಿರ ನಡೆಯಿತು.