ಪ್ರತಿಸ್ಪರ್ಧಿ ಕಂಪೆನಿಗೆ ಅಕ್ರಮವಾಗಿ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ

File Photo: PTI
ಹೊಸದಿಲ್ಲಿ: ವಿಪ್ರೋ(Wipro) ಅಧ್ಯಕ್ಷ ರಿಷಾದ್ ಪ್ರೇಮ್ಜಿ (Rishad Premji) ಅವರು ತಮ್ಮ 300 ಉದ್ಯೋಗಿಗಳು ಒಂದೇ ಸಮಯದಲ್ಲಿ ತಮ್ಮ ಪ್ರತಿಸ್ಪರ್ಧಿ ಕಂಪೆನಿಯೊಂದಿಗೆ ಕೆಲಸ ಮಾಡಿರುವುದು ಕಂಡುಬಂದಿದ್ದು, ಮತ್ತು ಅಂತಹ ಸಿಬ್ಬಂದಿಗಳ ಸೇವೆಯನ್ನು ಕೊನೆಗೊಳಿಸುವ ಮೂಲಕ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
"ವಿಪ್ರೊದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಲ್ಲಿ ಕೆಲವರು ನಮ್ಮ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಿಗಾಗಿ ನೇರವಾಗಿ ಕೆಲಸ ಮಾಡುತ್ತಿದ್ದಾರೆ, ಕಳೆದ ಕೆಲವು ತಿಂಗಳುಗಳಲ್ಲಿ ನಿಖರವಾಗಿ ಅಂತಹ 300 ಜನರನ್ನು ನಾವು ಕಂಡುಹಿಡಿದಿದ್ದೇವೆ" ಎಂದು ಪ್ರೇಮ್ಜಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.
ಕಂಪನಿ ಮತ್ತು ಪ್ರತಿಸ್ಪರ್ಧಿಗಳಿಗಾಗಿ ಸಮಾನಾಂತರವಾಗಿ ಕೆಲಸ ಮಾಡುತ್ತಿರುವ ನೌಕರರನ್ನು ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ಕೇಳಿದಾಗ, "ಸಮಗ್ರತೆಯ ಉಲ್ಲಂಘನೆಯ ಕೃತ್ಯ"ಕ್ಕಾಗಿ ಅವರ ಉದ್ಯೋಗವನ್ನು ಕೊನೆಗೊಳಿಸಲಾಗಿದೆ ಎಂದು ಪ್ರೇಮ್ ಜಿ ಹೇಳಿದರು.
ಇದನ್ನೂ ಓದಿ: 19 ವರ್ಷದ 'ಝೆಪ್ಟೋ' ಸ್ಥಾಪಕರು ಭಾರತದ ಅತ್ಯಂತ ಕಿರಿಯ ಶ್ರೀಮಂತ ವ್ಯಕ್ತಿಗಳು







