ವಕ್ಫ್ ಸೊತ್ತುಗಳ ಸಮೀಕ್ಷೆ ಆರಂಭಿಸಲಿರುವ ಉ.ಪ್ರ. ಸರಕಾರ

ಹೊಸದಿಲ್ಲಿ, ಸೆ. 21: ಮದರಸಗಳ ಸಮೀಕ್ಷೆಯ ನಡುವೆ ಉತ್ತರಪ್ರದೇಶ ಸರಕಾರ ರಾಜ್ಯದಲ್ಲಿರುವ ಎಲ್ಲಾ ವಕ್ಫ್ ಸೊತ್ತುಗಳ ಸಮೀಕ್ಷೆ ನಡೆಸಲು ನಿರ್ಧರಿಸಿದೆ.
ಸರಕಾರದ ಈ ನಿರ್ಧಾರಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷ, ಇದು ಜನರನ್ನು ಕೇವಲ ಹಿಂದೂ-ಮುಸ್ಲಿಂ ವಿಚಾರದಲ್ಲಿ ಸಿಲುಕಿಸುವ ಪ್ರಯತ್ನ ಎಂದು ಹೇಳಿದೆ. ಎತ್ತರದ ಅಥವಾ ಗುಡ್ಡಗಾಡು ಭೂಮಿ, ಬಂಜರು ಭೂಮಿಯನ್ನು ವಕ್ಫ್ ನ ಆಸ್ತಿಯಾಗಿ ರೂಢಿಗತವಾಗಿ ನೋಂದಾಯಿಸುವುದನ್ನು ಕಡ್ಡಾಯಗೊಳಿಸುವ ಸರಕಾರದ 1989ರ ಆದೇಶವನ್ನು ಉತ್ತರಪ್ರದೇಶ ಸರಕಾರ ಮಂಗಳವಾರ ರದ್ದುಗೊಳಿಸಿತು.
1989 ಎಪ್ರಿಲ್ 7ರಿಂದ ವಕ್ಫ್ ಅಡಿಯಲ್ಲಿ ನೋಂದಣಿಯಾಗಿರುವ ಎಲ್ಲಾ ಆಸ್ತಿಗಳ ದಾಖಲೆಗಳನ್ನು ಮರು ಪರಿಶೀಲಿಸುವಂತೆ ಹಾಗೂ ಅಂತಹ ಜಮೀನುಗಳ ಸ್ಥಿತಿಯನ್ನು ದಾಖಲಿಸುವಂತೆ ಉತ್ತರಪ್ರದೇಶ ಸರಕಾರ ಎಲ್ಲ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಆಯುಕ್ತರಿಗೆ ನಿರ್ದೇಶನ ನೀಡಿದೆ.
Next Story





