Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಸ್ಯ ತಳಿಗಳಿಗೆ ಪೇಟೆಂಟ್: ಕಂಪೆನಿಗಳು...

ಸಸ್ಯ ತಳಿಗಳಿಗೆ ಪೇಟೆಂಟ್: ಕಂಪೆನಿಗಳು ಮತ್ತು ರೈತರ ನಡುವೆ ಸಂಘರ್ಷ

ಫ್ಲಾವಿಯಾ ಲೋಪ್ಸ್ ಕೃಪೆ: IndiaSpend.comಫ್ಲಾವಿಯಾ ಲೋಪ್ಸ್ ಕೃಪೆ: IndiaSpend.com22 Sept 2022 12:15 AM IST
share
ಸಸ್ಯ ತಳಿಗಳಿಗೆ ಪೇಟೆಂಟ್: ಕಂಪೆನಿಗಳು ಮತ್ತು ರೈತರ ನಡುವೆ ಸಂಘರ್ಷ

ಬಹುರಾಷ್ಟ್ರೀಯ ಆಹಾರ ಮತ್ತು ಪಾನೀಯ ಕಂಪೆನಿ ಪೆಪ್ಸಿಕೊ ಇಂಡಿಯಾದ ವಿರುದ್ಧ ರೈತರ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕುರುಗಂಟಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ. ಈ ಕಾನೂನು ಸಮರವು ಸಸ್ಯ ತಳಿ ಅಭಿವೃದ್ಧಿಪಡಿಸುವ ಕಾರ್ಪೊರೇಶನ್‌ಗಳು ಮತ್ತು ಅಭಿವೃದ್ಧಿಶೀಲ ದೇಶಗಳ ರೈತರ ನಡುವಿನ ಸಂಘರ್ಷವನ್ನು ಮುನ್ನೆಲೆಗೆ ತಂದಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಆಡಳಿತ ವ್ಯವಸ್ಥೆಯೊಂದನ್ನು ಈ ಕಾರ್ಪೊರೇಶನ್‌ಗಳು ಬಯಸುತ್ತಿವೆ. ಅದೇ ವೇಳೆ, ಯಾವುದೇ ಬೆಳೆಯನ್ನಾದರೂ ಬೆಳೆಯುವ ಹಕ್ಕನ್ನು ರೈತರು ಕೇಳುತ್ತಿದ್ದಾರೆ.

ಸಸ್ಯ ತಳಿಗಳ ಮೇಲೆ ತಾವು ಹೊಂದಿರುವ ಪೇಟೆಂಟ್‌ಗಳನ್ನು ಜಾರಿಗೊಳಿಸುವ ಹಕ್ಕನ್ನು ಅವುಗಳನ್ನು ಅಭಿವೃದ್ಧಿಪಡಿಸುವವರಿಗೆ ನೀಡಬೇಕು ಎಂದು ಅಂತರ್‌ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ಸಮ್ಮೇಳನಗಳು ಬಯಸುತ್ತಿವೆ. ಸಸ್ಯ ತಳಿ ಅಭಿವೃದ್ಧಿಪಡಿಸುವವರ ಮಾರುಕಟ್ಟೆಯಲ್ಲಿ, ಜಾಗತಿಕ ಮಟ್ಟದಲ್ಲಿ ಮತ್ತು ಭಾರತದಲ್ಲಿ ಬೆರಳೆಣಿಕೆಯ ಬೃಹತ್ ಕಾರ್ಪೊರೇಶನ್‌ಗಳು ಪ್ರಾಬಲ್ಯವನ್ನು ಹೊಂದಿವೆ. ಭಾರತದಂಥ ಅಭಿವೃದ್ಧಿಶೀಲ ದೇಶಗಳು, ಅಂತರ್‌ರಾಷ್ಟ್ರೀಯ ಬೌದ್ಧಿಕ ಹಕ್ಕುಗಳನ್ನು ಹೊಂದಿರುವ ತಳಿಗಳು ಸೇರಿದಂತೆ ಯಾವುದೇ ಸಸ್ಯ ತಳಿಯ ಬೀಜಗಳನ್ನಾದರೂ ಬಳಸುವ, ಬಿತ್ತುವ ಮತ್ತು ಮಾರಾಟ ಮಾಡುವ ರೈತರ ಹಕ್ಕುಗಳನ್ನು ರಕ್ಷಿಸಲು ಬಯಸುತ್ತಿವೆ.
ಬಟಾಟೆ ತಳಿ ಎಫ್‌ಎಲ್-2027ರ ಮೇಲೆ ಪೆಪ್ಸಿಕೊ ಇಂಡಿಯಾ ಹೊಂದಿರುವ ಹಕ್ಕನ್ನು ರದ್ದುಪಡಿಸಬೇಕು ಎಂದು ಕೋರಿ ಕುರುಗಂಟಿ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ರಕ್ಷಣಾ ಪ್ರಾಧಿಕಾರಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಲೇಸ್‌ನ ಬಟಾಟೆ ಚಿಪ್ಸ್‌ಗಳನ್ನು ಮಾಡಲು ಎಫ್‌ಎಲ್-2027 ಬಟಾಟೆಯನ್ನು ಬಳಸುತ್ತದೆ. ಪ್ರಾಧಿಕಾರವು 2021 ಡಿಸೆಂಬರ್‌ನಲ್ಲಿ ಆದೇಶವೊಂದನ್ನು ನೀಡಿ, ಕುರುಗಂಟಿಯವರ ಮನವಿಯನ್ನು ಪುರಸ್ಕರಿಸಿತು. ಈ ಆದೇಶದ ವಿರುದ್ಧ ಪೆಪ್ಸಿಕೊ ಇಂಡಿಯಾವು ಸಲ್ಲಿಸಿದ ಮನವಿಯನ್ನು ದಿಲ್ಲಿ ಹೈಕೋರ್ಟ್ 2022 ಸೆಪ್ಟಂಬರ್ 12ರಂದು ವಿಚಾರಣೆಗೆ ಎತ್ತಿಕೊಂಡಿತು.
ಪೆಪ್ಸಿಕೊ ಇಂಡಿಯಾಕ್ಕೆ ಈ ಬಟಾಟೆ ತಳಿಯ ಹಕ್ಕನ್ನು 2016 ಫೆಬ್ರವರಿಯಲ್ಲಿ ಭಾರತದ ಸಸ್ಯ ತಳಿ ಮತ್ತು ರೈತರ ಹಕ್ಕುಗಳ ರಕ್ಷಣಾ ಕಾಯ್ದೆ, 2001ರ ಅಡಿಯಲ್ಲಿ ನೀಡಲಾಗಿತ್ತು. ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ರಕ್ಷಣಾ ಪ್ರಾಧಿಕಾರವು ಈ ಕಾಯ್ದೆಯ ಅಡಿಯಲ್ಲಿ ರಚನೆಯಾಗಿರುವ ಶಾಸನಾತ್ಮಕ ಸಂಸ್ಥೆಯಾಗಿದೆ. ಎಫ್‌ಎಲ್-2017 ಬಟಾಟೆ ತಳಿಯ ಮೇಲೆ ತಾನು ಹೊಂದಿರುವ ಹಕ್ಕನ್ನು ಮರಳಿಸುವಂತೆ ಪೆಪ್ಸಿಕೊ ಇಂಡಿಯಾವು ಹೈಕೋರ್ಟ್‌ಗೆ ಮನವಿ ಮಾಡಿದೆ.
ಪೆಪ್ಸಿಕೊ ಇಂಡಿಯಾವು 2019 ಎಪ್ರಿಲ್‌ನಲ್ಲಿ ಗುಜರಾತ್‌ನ ಒಂಭತ್ತು ರೈತರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿ, ಈ ರೈತರು ಕಂಪೆನಿಯಿಂದ ಪರವಾನಿಗೆ ಅಥವಾ ಅನುಮೋದನೆ ಪಡೆಯದೆ ‘ಅಕ್ರಮವಾಗಿ’ ಎಫ್‌ಎಲ್-2027 ಬಟಾಟೆ ತಳಿಯನ್ನು ಬೆಳೆಯುತ್ತಿದ್ದಾರೆ ಎಂದು ಆರೋಪಿಸಿತ್ತು. ಇದು 2001ರ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಅದು ವಾದಿಸಿತ್ತು. ಈ ಹಿನ್ನೆಲೆಯಲ್ಲಿ, ಪೆಪ್ಸಿಕೊ ಇಂಡಿಯಾದ ಪೇಟೆಂಟನ್ನು ರದ್ದುಪಡಿಸಬೇಕು ಎಂದು ಕೋರಿ ಕುರುಗಂಟಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಇದಕ್ಕಾಗಿ ತನಗೆ ಒಟ್ಟು 5 ಕೋಟಿ ರೂಪಾಯಿಗೂ ಅಧಿಕ ಪರಿಹಾರ ನೀಡಬೇಕೆಂದು ಪೆಪ್ಸಿಕೊ ಇಂಡಿಯಾ ತನ್ನ ಮೊಕದ್ದಮೆಯಲ್ಲಿ ಕೋರಿತ್ತು. ಆದರೆ, ಅದು ಮೊಕದ್ದಮೆ ಸಲ್ಲಿಸಿದ ತಿಂಗಳಲ್ಲೇ ಅದನ್ನು ವಾಪಸ್ ಪಡೆದುಕೊಂಡಿತು. ಪೆಪ್ಸಿಕೊ ಇಂಡಿಯಾವು ಪ್ರಸಕ್ತ ಕಾಯ್ದೆಯ ಅಡಿಯಲ್ಲಿ, ‘ಅದಾಗಲೇ ಚಾಲ್ತಿಯಲ್ಲಿದ್ದ ತಳಿ’ ಎಫ್‌ಎಲ್-2027ಕ್ಕೆ ಪೇಟೆಂಟ್ ಪಡೆದುಕೊಂಡಿತ್ತು ಎಂಬುದಾಗಿ ಪ್ರಾಧಿಕಾರವು ತನ್ನ ಆದೇಶದಲ್ಲಿ ಹೇಳಿತು. ಅಂದರೆ, ಪೆಪ್ಸಿಕೊ ಇಂಡಿಯಾ ಕಂಪೆನಿಯು ಪೇಟೆಂಟ್ ಪಡೆದುಕೊಳ್ಳುವ ಮೊದಲೇ ಈ ಬಟಾಟೆ ತಳಿಯನ್ನು ಬೆಳೆಯಲಾಗುತ್ತಿತ್ತು ಹಾಗೂ ಆ ತಳಿಯ ಬಗ್ಗೆ ಭಾರತೀಯ ರೈತರಿಗೆ ಜ್ಞಾನವಿತ್ತು ಎನ್ನುವುದು ಅದರ ಆದೇಶದ ತಾತ್ಪರ್ಯವಾಗಿತ್ತು.
ಸಸ್ಯ ಬೀಜಗಳ ಪೇಟೆಂಟ್‌ಗಳನ್ನು ನೀಡುವುದಕ್ಕಾಗಿ ‘ಸಸ್ಯ ತಳಿ ಮತ್ತು ರೈತರ ಹಕ್ಕುಗಳ ರಕ್ಷಣಾ ಕಾಯ್ದೆ’ಯನ್ನು ತರಲಾಯಿತಾದರೂ, ಈ ಕಾಯ್ದೆಯು, ಅದರಡಿಯಲ್ಲಿ ನೋಂದಣಿಯಾಗಿರುವ ಬೀಜಗಳು ಮತ್ತು ತಳಿಗಳು ಸೇರಿದಂತೆ ಎಲ್ಲಾ ತಳಿಯ ಬೀಜಗಳನ್ನು ಬಿತ್ತುವ, ಮರುಬಿತ್ತುವ, ವಿನಿಮಯ ಮಾಡುವ ಅಥವಾ ಮಾರಾಟ ಮಾಡುವ ರೈತರ ಹಕ್ಕುಗಳನ್ನೂ ಅದು ರಕ್ಷಿಸುತ್ತದೆ.
ಸಂರಕ್ಷಿತ ತಳಿಯ ಬೀಜಗಳನ್ನು ಪೊಟ್ಟಣಗಳಲ್ಲಿ ಅಥವಾ ಕಂಟೇನರ್‌ಗಳಲ್ಲಿ ಅವುಗಳ ಹೆಸರಿನ ಲೇಬಲ್‌ಗಳನ್ನು ಹಾಕಿ ಮಾರಾಟ ಮಾಡುವುದರಿಂದ ಮಾತ್ರ ಈ ಕಾಯ್ದೆಯು ರೈತರನ್ನು ನಿರ್ಬಂಧಿಸುತ್ತದೆ.
ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಎಫ್‌ಎಲ್-2027 ಬಟಾಟೆ ತಳಿಯನ್ನು ಬೆಳೆಸುತ್ತಿರುವ ಸಾವಿರಾರು ರೈತರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ಈ ಬಟಾಟೆ ತಳಿ ಮೇಲಿನ ತನ್ನ ಪೇಟೆಂಟನ್ನು ಹೈಕೋರ್ಟ್ ಮರಳಿಸಬೇಕು ಎಂಬುದಾಗಿ ಕಂಪೆನಿ ಬಯಸುತ್ತದೆ ಎಂದು ಪೆಪ್ಸಿಕೊ ಇಂಡಿಯಾದ ವಕ್ತಾರರೊಬ್ಬರು ‘ಇಂಡಿಯಾಸ್ಪೆಂಡ್’ ಗೆ ತಿಳಿಸಿದ್ದಾರೆ.
ಆದರೆ ಈ ವಾದವನ್ನು ರೈತ ಹೋರಾಟಗಾರರು ತಿರಸ್ಕರಿಸುತ್ತಾರೆ. ಸಸ್ಯ ತಳಿಗಳ ಪೇಟೆಂಟ್ ಪಡೆದುಕೊಂಡಿರುವ ಕಂಪೆನಿಗಳು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ರೈತರ ಮೇಲೆ ಬಲವಂತದ ಕ್ರಮಗಳನ್ನು ಹೇರುತ್ತಿವೆ ಎಂದು ಅವರು ಆರೋಪಿಸುತ್ತಾರೆ.
ಆದರೆ, ಉತ್ತಮ ಇಳುವರಿಗಾಗಿ ನೂತನ ಸಸ್ಯ ತಳಿಗಳ ಅಭಿವೃದ್ಧಿಗೆ ಉತ್ತೆಜನ ನೀಡಲು ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಅಗತ್ಯವಾಗಿದೆ; ಯಾಕೆಂದರೆ ನೂತನ ತಳಿಗಳ ಅಭಿವೃದ್ಧಿಗೆ ಹಲವು ವರ್ಷಗಳೇ ಬೇಕಾಗುತ್ತವೆ ಎಂದು ಕಾನೂನು ಪರಿಣತರು ಹೇಳುತ್ತಾರೆ. ಪೆಪ್ಸಿಕೊ ಇಂಡಿಯಾದ ಮೊಕದ್ದಮೆಯ ಮುಂದಿನ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ನವೆಂಬರ್ 2ಕ್ಕೆ ನಿಗದಿಪಡಿಸಿದೆ.
ಅದಕ್ಕಿಂತ ಮುಂಚಿತವಾಗಿ, ಅಂದರೆ ಸೆಪ್ಟಂಬರ್ 19ರಿಂದ 24ರವರೆಗೆ ಭಾರತವು ಆಹಾರ ಮತ್ತು ಕೃಷಿ ಸಂಘಟನೆಯ ಆಹಾರ ಮತ್ತು ಕೃಷಿ ಸಮ್ಮೇಳನವೊಂದರ ಆತಿಥ್ಯ ವಹಿಸುತ್ತಿದೆ. ಆಹಾರ ಮತ್ತು ಕೃಷಿ ಸಂಘಟನೆಗೆ ಒಳಪಟ್ಟ ಆಹಾರ ಮತ್ತು ಕೃಷಿಗಾಗಿನ ಅಂತರ್‌ರಾಷ್ಟ್ರೀಯ ಸಸ್ಯ ವಂಶವಾಹಿ ಸಂಪನ್ಮೂಲಗಳ ಒಪ್ಪಂದವು ಈ ಸಮ್ಮೇಳನದ ನೇತೃತ್ವ ವಹಿಸಿದೆ. 148 ಸದಸ್ಯರ ಈ ಸಂಘಟನೆಯು ಆಹಾರ ಮತ್ತು ಕೃಷಿಗಾಗಿ ವಂಶವಾಹಿ ಸಂಪನ್ಮೂಲಗಳನ್ನು ಬಿತ್ತುವ ರೈತರ ಹಕ್ಕುಗಳನ್ನು ಮಾನ್ಯ ಮಾಡುತ್ತದೆ.

ಬಟಾಟೆ ತಳಿಗಳ ಪೇಟೆಂಟ್ ವಿತರಣೆ
2009ರಲ್ಲಿ, ಅಮೆರಿಕದ ಬಹುರಾಷ್ಟ್ರೀಯ ಆಹಾರ ಮತ್ತು ಪಾನೀಯ ಕಂಪೆನಿ ಪೆಪ್ಸಿಕೊ ಇನ್‌ಕಾರ್ಪೊರೇಟೆಡ್‌ನ ಉಪ ಸಂಸ್ಥೆ ಪೆಪ್ಸಿಕೊ ಇಂಡಿಯಾ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್, ಎಫ್‌ಎಲ್-2027 ಬಟಾಟೆ ತಳಿಯನ್ನು ಅಮೆರಿಕದಿಂದ ಆಮದು ಮಾಡಿಕೊಂಡು ಭಾರತೀಯ ಮಾರುಕಟ್ಟೆಯಲ್ಲಿ ಅದನ್ನು ವಾಣಿಜ್ಯಿಕವಾಗಿ ಬಳಸಲು ಆರಂಭಿಸಿತು.
ಇದಕ್ಕಾಗಿ ಅದು ರೈತರೊಂದಿಗೆ ಕೃಷಿ ಗುತ್ತಿಗೆಗಳನ್ನು ಮಾಡಿಕೊಂಡಿತು. ಕಂಪೆನಿಯು ಈ ರೈತರಿಗೆ ಎಫ್‌ಎಲ್-2027 ಬಟಾಟೆ ಬೀಜಗಳನ್ನು ಪೂರೈಸಿತು ಹಾಗೂ ಗುತ್ತಿಗೆಯ ಶರತ್ತಿನಂತೆ ಮೊದಲೇ ನಿರ್ಧರಿತ ಬೆಲೆಯಲ್ಲಿ ಬಟಾಟೆ ಬೆಳೆಯನ್ನು ಖರೀದಿಸಿತು.
ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಪೇಟೆಂಟ್‌ಗೆ ಮುಕ್ತವಾಗಿರುವ 172 ಬೆಳೆಗಳ ಪೈಕಿ ಬಟಾಟೆಯೂ ಒಂದು.
2022 ಆಗಸ್ಟ್ ವೇಳೆಗೆ, 42 ಬಟಾಟೆ ತಳಿಗಳಿಗೆ ಪೇಟೆಂಟ್ ನೀಡಲಾಗಿದೆ. ಈ ಪೈಕಿ 17 ತಳಿಗಳ ಪೇಟೆಂಟ್‌ಗಳನ್ನು ಕೃಷಿ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಕೃಷಿ ಸಂಶೋಧನೆ ಮಂಡಳಿಗೆ ನೀಡಲಾಗಿದೆ. ಒಂದು ತಳಿಯ ಪೇಟೆಂಟನ್ನು ರೈತರೊಬ್ಬರು ಪಡೆದಿದ್ದಾರೆ. ಉಳಿದವುಗಳ ಪೇಟೆಂಟ್‌ಗಳನ್ನು ಪೆಪ್ಸಿಕೊ ಇಂಡಿಯಾ, ಫ್ರಾನ್ಸ್‌ನ ಜರ್ಮಿ ಕೋಪ ಎಸ್‌ಎಎಸ್ ಮತ್ತು ನೆದರ್‌ಲ್ಯಾಂಡ್ಸ್‌ನ ಕಂಪೆನಿಗಳಾದ ಎಚ್‌ಝಡ್‌ಪಿಸಿ ಹಾಲೆಂಡ್ ಬಿವಿ ಮತ್ತು ಸಿ ಮೈಜರ್ ಬಿವಿ ಸೇರಿದಂತೆ ವಿವಿಧ ಖಾಸಗಿ ಕಂಪೆನಿಗಳು ಪಡೆದುಕೊಂಡಿವೆ.
ಪೆಪ್ಸಿಕೊ ಇಂಡಿಯಾವು ರೈತರ ಹೊಲಗಳಲ್ಲಿ ಬೇಹುಗಾರಿಕೆ ನಡೆಸಲು ಖಾಸಗಿ ಗುಪ್ತಚರ ಸಂಸ್ಥೆಯೊಂದನ್ನು ನಿಯೋಜಿಸಿತು ಎಂದು 2019ರಲ್ಲಿ ಅಲಯನ್ಸ್ ಫಾರ್ ಸಸ್ಟೇನಬಲ್ ಆ್ಯಂಡ್ ಹೋಲಿಸ್ಟಿಕ್ ಅಗ್ರಿಕಲ್ಚರ್ ನೆಟ್‌ವರ್ಕ್‌ನ ಸಂಚಾಲಕಿ ಕುರುಗಂಟಿ ಆರೋಪಿಸಿದರು. ಈ ಬೇಹುಗಾರರು ಬೆಳೆಗಳ ಖರೀದಿದಾರ ಸೋಗಿನಲ್ಲಿ 2019ರ ಜನವರಿ ಮತ್ತು ಫೆಬ್ರವರಿಯಲ್ಲಿ ಗುಜರಾತ್‌ನ ಕೆಲವು ಬಟಾಟೆ ಬೆಳೆಗಾರರ ಹೊಲಗಳಿಗೆ ಭೇಟಿ ನೀಡಿದರು ಎಂದು ಅವರು ಹೇಳಿದರು.
ಈ ರೈತರು ಬೆಳೆದ ಬಟಾಟೆಗಳನ್ನು ಬಳಿಕ ತಾನು ಪರೀಕ್ಷೆ ನಡೆಸಿದ್ದು, ಅವು ಎಫ್‌ಎಲ್-2027 ತಳಿ ಎನ್ನುವುದು ಪತ್ತೆಯಾಗಿದೆ ಎಂದು ಕಂಪೆನಿ ಹೇಳಿದೆ. ಆದರೆ ಈ ರೈತರು ಕಂಪೆನಿಯೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ಅದು ಹೇಳಿತು. ಬಳಿಕ, ಆ ವರ್ಷದ ಎಪ್ರಿಲ್‌ನಲ್ಲಿ ಕಂಪೆನಿಯು ಈ ರೈತರ ವಿರುದ್ಧ ಅಹ್ಮದಾಬಾದ್‌ನ ಸಿವಿಲ್ ನ್ಯಾಯಾಲಯದಲ್ಲಿ ವೈಯಕ್ತಿಕ ಮೊಕದ್ದಮೆಗಳನ್ನು ದಾಖಲಿಸಿತು. ಈ ಬಟಾಟೆ ತಳಿಯನ್ನು ರೈತರು ಬೆಳೆಯದಂತೆ ತಡೆಯುವುದು ಅದರ ಉದ್ದೇಶವಾಗಿದೆ ಎಂದು ಕುರುಗಂಟಿ ಹೇಳಿದರು.
ತಾವು ಯಾವುದೇ ಕಂಪೆನಿಯ ವಿಶೇಷ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದೇವೆ ಎನ್ನುವುದು ಆ ರೈತರಿಗೆ ತಿಳಿದಿರಲಾರದು ಎಂದು ಕುರುಗಂಟಿ ಹೇಳಿದ್ದಾರೆ. ಒಂದು ವೇಳೆ ಅವರಿಗೆ ತಿಳಿದಿದ್ದರೂ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ರಕ್ಷಣಾ ಕಾಯ್ದೆಯ ವಿಧಿಗಳನ್ವಯ ಅದು ಉಲ್ಲಂಘನೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಯಾಕೆಂದರೆ, ಈ ಕಾಯ್ದೆಯಡಿ ನೋಂದಣಿಯಾಗಿರುವ ತಳಿಗಳೂ ಸೇರಿದಂತೆ ಯಾವುದೇ ಬೀಜಗಳನ್ನು ಸಂರಕ್ಷಿಸುವ, ಬಳಸುವ, ಬಿತ್ತುವ, ಮರುಬಿತ್ತುವ, ವಿನಿಮಯ ಮಾಡುವ, ಹಂಚಿಕೆ ಮಾಡುವ ಅಥವಾ ಅದರಿಂದ ಬರುವ ಉತ್ಪನ್ನವನ್ನು ಮಾರಾಟ ಮಾಡುವ ರೈತರ ಹಕ್ಕುಗಳನ್ನು ಕಾಯ್ದೆಯು ಎತ್ತಿಹಿಡಿಯುತ್ತದೆ.
ತಳಿ ಅಭಿವೃದ್ಧಿ ಪಡಿಸಿರುವ ಪೆಪ್ಸಿಕೊ ಇಂಡಿಯಾವು ತಪ್ಪು ಮಾಹಿತಿ ನೀಡಿ ಪೇಟೆಂಟ್ ಪಡೆದಿದೆ ಎಂಬುದಾಗಿ ತನ್ನ ಅರ್ಜಿಯಲ್ಲಿ ಕುರುಗಂಟಿ ಆರೋಪಿಸಿದ್ದಾರೆ. 2001ರ ಕಾಯ್ದೆಯ ವಿಧಿಗಳು ಅಥವಾ ನಿಯಮಾವಳಿಗಳನ್ನು ಅದು ಅನುಸರಿಸಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ. ಅದೂ ಅಲ್ಲದೆ, ಕಂಪೆನಿಗೆ ಪೇಟೆಂಟ್ ನೀಡಿರುವುದು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ

share
ಫ್ಲಾವಿಯಾ ಲೋಪ್ಸ್ ಕೃಪೆ: IndiaSpend.com
ಫ್ಲಾವಿಯಾ ಲೋಪ್ಸ್ ಕೃಪೆ: IndiaSpend.com
Next Story
X