ಮುಂಬೈ ಶಿವಾಜಿ ಪಾರ್ಕ್ನಲ್ಲಿ ದಸರಾ ರ್ಯಾಲಿ ನಡೆಸಲು ಶಿವಸೇನೆಯ ಎರಡೂ ಬಣಗಳಿಗೆ ಅನುಮತಿ ನಿರಾಕರಿಸಿದ ಬಿಎಂಸಿ

Photo:PTI
ಮುಂಬೈ: ಮುಂಬೈನ ಶಿವಾಜಿ ಪಾರ್ಕ್ನಲ್ಲಿ ದಸರಾ ರ್ಯಾಲಿ ನಡೆಸಲು ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಣಗಳಿಗೆ ಅನುಮತಿ ನೀಡಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗುರುವಾರ ನಿರಾಕರಿಸಿದೆ. denied nod to hold Dussehra rally at Mumbai's Shivaji Park. ರ್ಯಾಲಿಗೆ ಅವಕಾಶ ನೀಡುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂಬ ಪೊಲೀಸ್ ವರದಿಯನ್ನು ಉಲ್ಲೇಖಿಸಿ ಮಹಾನಗರ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.
ಗಣಪತಿ ವಿಸರ್ಜನಾ ದಿನದಂದು ದಾದರ್ ಪೊಲೀಸ್ ಠಾಣೆಯ ಆವರಣದಲ್ಲಿ ಗುಂಡಿನ ದಾಳಿ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಈ ಪರಿಸ್ಥಿತಿಯಲ್ಲಿ ಶಿವಾಜಿ ಪಾರ್ಕ್ನಲ್ಲಿ ಎರಡೂ ಬಣಗಳಿಗೆ ದಸರಾ ರ್ಯಾಲಿ ನಡೆಸಲು ಅನುಮತಿ ನೀಡಿದರೆ ಗಂಭೀರ ಕಾನೂನು ಸುವ್ಯವಸ್ಥೆ ಉಂಟಾಗಬಹುದು ಎಂದು ಪೊಲೀಸರು ಬಿಎಂಸಿಗೆ ವರದಿ ಸಲ್ಲಿಸಿದ್ದಾರೆ.
ಈ ಕಾನೂನು ಮತ್ತು ಸುವ್ಯವಸ್ಥೆ ಮೌಲ್ಯಮಾಪನದ ಆಧಾರದ ಮೇಲೆ ಶಿವಾಜಿ ಪಾರ್ಕ್ನಲ್ಲಿ ದಸರಾ ರ್ಯಾಲಿ ನಡೆಸಲು ಯಾವುದೇ ಪಕ್ಷಗಳಿಗೆ ಅನುಮತಿ ನೀಡಬಾರದು ಎಂದು ಪೊಲೀಸರು ಬಿಎಂಸಿಗೆ ಶಿಫಾರಸು ಮಾಡಿದ್ದಾರೆ.
“ಪೊಲೀಸ್ ವರದಿಯ ಆಧಾರದ ಮೇಲೆ ನಾವು ಶಿವಸೇನೆಯ ಸಂಸದ ಅನಿಲ್ ದೇಸಾಯಿ ಮತ್ತು ಶಿಂಧೆ ಬಣದ ಶಾಸಕ ಸದಾ ಸರ್ವಂಕರ್ ಅವರಿಗೆ ನಿರಾಕರಣೆ ಪತ್ರಗಳನ್ನು ನೀಡಿದ್ದೇವೆ. ಈಗಾಗಲೇ ಉದ್ವಿಗ್ನವಾಗಿರುವ ದಾದರ್ ಪ್ರದೇಶದಲ್ಲಿ ರ್ಯಾಲಿಗೆ ಅವಕಾಶ ನೀಡುವುದು ಗಂಭೀರ ಕಾನೂನು ಮತ್ತು ಸುವ್ಯವಸ್ಥೆಗೆ ಕಾರಣವಾಗಬಹುದು ಎಂಬ ಪೊಲೀಸರ ವರದಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ'ಎಂದು ಬಿಎಂಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







