ಭಾರತ-ಆಸ್ಟ್ರೇಲಿಯ ಟಿ-20 ಪಂದ್ಯದ ಟಿಕೆಟ್ ಖರೀದಿಗೆ ಮುಗಿಬಿದ್ದ ಅಭಿಮಾನಿಗಳು, ಕಾಲ್ತುಳಿತದಲ್ಲಿ ನಾಲ್ವರಿಗೆ ಗಾಯ

Photo: twitter
ಹೈದರಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದ ಟಿಕೆಟ್ ಖರೀದಿಸಲು ಗುರುವಾರ ಭಾರೀ ಪ್ರಮಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ ಪರಿಣಾಮ ಜಿಮ್ಖಾನಾ ಮೈದಾನದಲ್ಲಿ ಕಾಲ್ತುಳಿತ (Stampede In Hyderabad )ಸಂಭವಿಸಿ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟಿ-20 ಪಂದ್ಯವು ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25 ರಂದು ನಡೆಯಲಿದೆ. ಟಿಕೆಟ್ ಖರೀದಿಸಲು ಜಿಮ್ಖಾನಾ ಮೈದಾನಕ್ಕೆ ಭಾರೀ ಪ್ರಮಾಣದಲ್ಲಿ ಜನರು ಆಗಮಿಸಿದ್ದರು. ಅಭಿಮಾನಿಗಳ ದೊಡ್ಡ ಸರತಿ ಸಾಲಿನಲ್ಲಿ ಟಿಕೆಟ್ ಪಡೆಯಲು ಕಾದು ನಿಂತಿದ್ದರು.
ಆದರೆ ತಕ್ಷಣವೇ ಪರಿಸ್ಥಿತಿ ಕೈಮೀರಿತು ಹಾಗೂ ಕಾಲ್ತುಳಿತ ಉಂಟಾಯಿತು. ಉತ್ಸಾಹಭರಿತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಂಟುಮಾಡಿದರು. ಭಾರೀ ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿ ತಹಬಂದಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು.
#WATCH | Telangana: A stampede broke out at Gymkhana Ground after a huge crowd of cricket fans gathered there to get tickets for #INDvsAUS match, scheduled for 25th Sept at Rajiv Gandhi International Stadium, Hyderabad. Police baton charged to disperse the crowd
— ANI (@ANI) September 22, 2022
4 people injured pic.twitter.com/J2OiP1DMlH







