ಉಡುಪಿ: ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಬಾಲಕ ಮೃತ್ಯು

ಉಡುಪಿ: 13 ವರ್ಷ ಪ್ರಾಯದ ಬಾಲಕನೊಬ್ಬ ಅಪಾರ್ಟ್‌ಮೆಂಟ್‌ನ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಇಲ್ಲಿನ ಕನ್ನರ್ಪಾಡಿಲ ಜಯದುರ್ಗಾ ದೇವಸ್ಥಾನದ ಎದುರು ಸಂಭವಿಸಿದೆ.
ಆಂಧ್ರಪ್ರದೇಶ ಮೂಲದ ಪ್ರಸ್ತುತ ಉದ್ಯಾವರದ ಚರ್ಚ್ ಹಿಂದುಗಡೆ ಟೆಂಟ್‌ನಲ್ಲಿ ವಾಸವಾಗಿರುವ ರೀನಾ ಮಂಡಲ್ ಎಂಬವರ ಮಗ ಅಶಿಕ್(13) ಮೃತಪಟ್ಟ ಬಾಲಕ. ಆಂಧ್ರ ಮೂಲದ ಈ ಕುಟುಂಬ ಊರೂರು ತಿರುಗಿ ಜೇನು ತೆಗೆಯುವ ಕೆಲಸ ಮಾಡಿಕೊಂಡಿದೆ.
ಅದೇ ರೀತಿ ಗುರುವಾರವೂ ರೀನಾ ಮಂಡೆಲ್ ಕುಟುಂಬದ ಸದಸ್ಯರು ಕನ್ನರ್ಪಾಡಿ ದೇವಸ್ಥಾನದ ಎದುರಿಗಿರುವ ಅಪಾರ್ಟ್‌ಮೆಂಟ್‌ನ ಮೇಲುಗಡೆ ಇದ್ದ ಜೇನನ್ನು ತೆಗೆಯಲು ಪ್ಲಾಟಿನ ಮಾಲಕರು ತಿಳಿಸಿದ್ದು, ಅದರಂತೆ ತಂಡದ ಆಕಾಶ್ ಮತ್ತು ರೋಶನ್ ಎಂಬವರು ಬೆಳಗ್ಗೆ 9.30ಕ್ಕೆ ಅಪಾರ್ಟ್‌ಮೆಂಟ್ ಮೇಲೆ ಹೋಗಿ ಜೇನು ತೆಗೆಯುತಿದ್ದಾಗ, ಮಹಡಿ ಮೇಲೆ ನಿಂತು ಇದನ್ನು ನೋಡುತಿದ್ದ ಆಶಿಕ್ ಅಕಸ್ಮಿಕವಾಗಿ ಆಯತಪ್ಪಿ ಮಹಡಿ ಮೇಲಿಂದ ಬಿದ್ದು, ತಲೆ ಮತ್ತು ಎದೆಗೆ ಗಂಭೀರ ಗಾಯಗೊಂಡಿದ್ದ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂಧಿಸದೇ ಬಾಲಕ ಮೃತಪಟ್ಟಿದ್ದಾನೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





