ವಿರಾಜಪೇಟೆ: ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಮಡಿಕೇರಿ ಸೆ.23 : ಗುಂಡಿಕ್ಕಿಕೊಂಡು ಯುವಕನೋರ್ವ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ವಿರಾಜಪೇಟೆ ಸಮೀಪದ ಮೈತಾಡಿ ಗ್ರಾಮದಲ್ಲಿ ನಡೆದಿದೆ.
ಮೈತಾಡಿ ಗ್ರಾಮದ ಕುಞಿರ ರಾಮು ಎಂಬುವವರ ಪುತ್ರ ಶರತ್ ಪೂವಯ್ಯ(33) ಎಂಬುವವರೇ ಸಾವನ್ನಪ್ಪಿರುವ ಯುವಕ ತಿಳಿದು ಬಂದಿದೆ.
ಈತ ತನ್ನ ವಾಸದ ಮನೆಯ ಬಳಿಯಲ್ಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು | 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಯೋಗ ಗುರುವಿಗೆ 5 ವರ್ಷ ಜೈಲು ಶಿಕ್ಷೆ
Next Story