ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ: ಶಮ್ಮಾಸ್ ಮುಹಿಯುದ್ದೀನ್ಗೆ ಚಿನ್ನದ ಪದಕ

ಶಮ್ಮಾಸ್ ಮುಹಿಯುದ್ದೀನ್
ಸುರತ್ಕಲ್, ಸೆ. 23: ಅಂಜುಮಾನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಮಾಸ್ಟರ್ ಶಮ್ಮಾಝ್ ಮುಹಿಯುದ್ದೀನ್ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಚಿನ್ನದ ಪದಕವನ್ನು ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುಕ್ಕ ನಿವಾಸಿ ಉಮರ್ ಫಾರೂಕ್ ಬಾವಾ ಇವರ ಪುತ್ರರಾಗಿರುವ ಶಮ್ಮಾಸ್ ಮುಹಿಯುದ್ದೀನ್, ಮುಲ್ಕಿ ಕಾರ್ನಾಡು ಸಿಎಸ್ಐ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮುಲ್ಕಿ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಬಳಿಕ ಆಗಸ್ಟ್ 6ರಂದು ವಾಣಿ ಆಂಗ್ಲ ಮಾಧ್ಯಮ ಶಾಲೆ, ಹಳೆಕೋಟೆ, ಬೆಳ್ತಂಗಡಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಚಿನ್ನದ ಪದಕವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶಮ್ಮಾಝ್ ಮುಹಿಯುದ್ದೀನ್ ಅವರ ಹೆತ್ತವರು, ಅಂಜುಮಾನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅಧ್ಯಾಪಕ ವೃಂದ ಮತ್ತು ಶಾಲಾಭಿವೃದ್ಧಿ ಸಮಿತಿ ಶುಭಹಾರೈಸಿದೆ.
Next Story