ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ರಶೀದ್ ವಿಟ್ಲ

ರಶೀದ್ ವಿಟ್ಲ, ಶಾಹುಲ್ ಹಮೀದ್, ಇಕ್ಬಾಲ್ ಮೆಲ್ಕಾರ್
ಬಿ.ಸಿ.ರೋಡ್, ಸೆ.24: ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ 2022 -2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಸಂಘಟಕ, ಬರಹಗಾರ ರಶೀದ್ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ.ಶಾಹುಲ್ ಹಮೀದ್, ಕೋಶಾಧಿಕಾರಿಯಾಗಿ ಎಂ.ಎಚ್.ಇಕ್ಬಾಲ್ ಮೆಲ್ಕಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೆಲ್ಕಾರ್ ಎಂ.ಎಚ್. ಕಾಂಪೌಂಡಲ್ಲಿ ಶುಕ್ರವಾರ ನಡೆದ ಜಮೀಯ್ಯತುಲ್ ಫಲಾಹ್ ನ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಘಟಕಾಧ್ಯಕ್ಷ ಹಾಜಿ ಎ.ಉಸ್ಮಾನ್ ಕರೋಪಾಡಿ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಎಚ್.ಇಕ್ಬಾಲ್ ಮೆಲ್ಕಾರ್ ಗತ ವರ್ಷದ ವರದಿ ವಾಚಿಸಿದರು. ಕೋಶಾಧಿಕಾರಿ ಎಫ್.ಎಂ.ಬಶೀರ್ ಲೆಕ್ಕಪತ್ರ ಮಂಡಿಸಿದರು, ಜಿಲ್ಲಾ ಸಮಿತಿಯಿಂದ ಉಸ್ತುವಾರಿಯಾಗಿ ಆಗಮಿಸಿದ ಸಲೀಮ್ ಹಂಡೇಲ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಆಡಳಿತಾಧಿಕಾರಿ ಜಮಾಲುದ್ದೀನ್, ಕಚೇರಿ ವ್ಯವಸ್ಥಾಪಕ ಆದಂ ಸಹಕರಿಸಿದರು.
ಉಪಾಧ್ಯಕ್ಷರಾಗಿ ಅಬ್ದುಲ್ಲತೀಫ್ ನೇರಳಕಟ್ಟೆ, ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಸುಲೈಮಾನ್ ಸೂರಿಕುಮೇರು, ಸಂಘಟನಾ ಕಾರ್ಯದರ್ಶಿಯಾಗಿ ಪಿ.ಮುಹಮ್ಮದ್ ಪಾಣೆಮಂಗಳೂರು, ಪತ್ರಿಕಾ ಕಾರ್ಯದರ್ಶಿಯಾಗಿ ಬಿ.ಎಂ.ತುಂಬೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಾಜಿ ಉಸ್ಮಾನ್ ಕರೋಪಾಡಿ, ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ರಫೀಕ್ ಹಾಜಿ ಆಲಡ್ಕ, ಎಫ್.ಎಂ.ಬಶೀರ್ ಫರಂಗಿಪೇಟೆ, ಬಿ.ಎಂ.ಅಬ್ಬಾಸ್ ಅಲಿ ಬೋಳಂತೂರು, ಅಬ್ದುಲ್ ರಝಾಕ್ ಅನಂತಾಡಿ, ಎಸ್.ಎಂ.ಮುಹಮ್ಮದ್ ಅಲಿ ಶಾಂತಿಅಂಗಡಿ, ಆಸಿಫ್ ಇಕ್ಬಾಲ್ ಫರಂಗಿಪೇಟೆ, ಅಬೂಬಕರ್ ವಿಟ್ಲ, ಎನ್.ಮುಹಮ್ಮದ್ ನಾರಂಕೋಡಿ, ಅಹ್ಮದ್ ಮುಸ್ತಫಾ ಗೋಳ್ತಮಜಲು, ಮಹಮ್ಮದ್ ವಳವೂರು, ಅಬ್ದುಲ್ ಹಕೀಂ ಕಲಾಯಿ ಅವರನ್ನು ಆರಿಸಲಾಯಿತು.
ಇದೇ ವೇಳೆ ಅಜೀವ ಸದಸ್ಯರ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಬಿ.ಎಂ.ಅಬ್ಬಾಸ್ ಅಲಿ ಸ್ವಾಗತಿಸಿದರು. ಕೆ.ಕೆ.ಶಾಹುಲ್ ಹಮೀದ್ ವಂದಿಸಿದರು. ರಝಾಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.




