ದಕ್ಷಿಣ ವಲಯಕ್ಕೆ ಸೋಲುಣಿಸಿ ದುಲೀಪ್ ಟ್ರೋಫಿ ಗೆದ್ದ ಪಶ್ಚಿಮ ವಲಯ

Photo:twitter
ಕೊಯಮತ್ತೂರು: ದಕ್ಷಿಣ ವಲಯ ತಂಡವನ್ನುಫೈನಲ್ ಪಂದ್ಯದಲ್ಲಿ 294 ರನ್ಗಳ ಅಂತರದಿಂದ ಮಣಿಸಿರುವ ಪಶ್ಚಿಮ ವಲಯವು ಈ ಬಾರಿಯ ದುಲೀಪ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.
ಕೊಯಮತ್ತೂರಿನಲ್ಲಿ ನಡೆದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಪಶ್ಚಿಮ ವಲಯ ಮೊದಲ ಇನಿಂಗ್ಸ್ ಗಳಲ್ಲಿ 270 ರನ್ ಗಳಿಸಿ ಆಲೌಟಾಗಿತ್ತು. ದಕ್ಷಿಣ ವಲಯ 327 ರನ್ ಗಳಿಸಿ 57 ರನ್ ಅಂತರದ ಮುನ್ನಡೆ ಸಾಧಿಸಿತ್ತು.
ಅಲ್ಪ ಹಿನ್ನಡೆ ಅನುಭವಿಸಿದರೂ 2ನೇ ಇನಿಂಗ್ಸ್ ನಲ್ಲಿ ಅಮೋಘ ಆಟವಾಡಿದ ಪಶ್ಚಿಮ ವಲಯ ಯಶಸ್ವಿ ಜೈಸ್ವಾಲ್ ಹಾಗೂ ಸರ್ಫರಾಝ್ ಖಾನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಗಳಿಸಿತು.
ಜೈಸ್ವಾಲ್ 323 ಎಸೆತಗಳನ್ನು ಎದುರಿಸಿ 30 ಬೌಂಡರಿ ಹಾಗೂ 4 ಸಿಕ್ಸರ್ ಗಳ ಸಹಿತ 265 ರನ್ ಗಳಿಸಿದ್ದರು. ಸರ್ಫರಾಝ್ 127 ರನ್ ಗಳಿಸಿ ಮಿಂಚಿದರು. ಹೀಗಾಗಿ ಎದುರಾಳಿ ತಂಡದ ಗೆಲುವಿಗೆ 529 ರನ್ ಗುರಿ ನೀಡಿತು.
ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ವಲಯ ಆಟಗಾರರಿಂದ ಉತ್ತಮ ಆಟ ಮೂಡಿಬರಲಿಲ್ಲ. ಅಂತಿಮವಾಗಿ 234 ರನ್ ಗಳಿಗೆ ಆಲೌಟ್ ಆಗುವುದರೊಂದಿಗೆ 294 ರನ್ ಅಂತರದ ಸೋಲುಂಡಿತು.
DO NOT MISS!
— BCCI Domestic (@BCCIdomestic) September 25, 2022
That moment when the @ajinkyarahane88-led West Zone lifted the prestigious #DuleepTrophy. #Final | #WZvSZ | @mastercardindia
Scorecard https://t.co/NAjd4WxZRR pic.twitter.com/NuzrOrd6Uh