ಮೊಬೈಲ್ ಅಂಗಡಿ ನುಗ್ಗಿ ಕಳವು
ಮಲ್ಪೆ, ಸೆ.25: ಮೊಬೈಲ್ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮಲ್ಪೆ ಬಸ್ ನಿಲ್ದಾಣ ಸಮೀಪ ಸೆ.24ರಂದು ರಾತ್ರಿ ವೇಳೆ ನಡೆದಿದೆ.
ಕಡಿಯಾಳಿಯ ಚೇತನ್ ಕುಮಾರ್ ಎಂಬವರ ಕರಾವಳಿ ಮೊಬೈಲ್ಸ್ ಎಂಬ ಅಂಗಡಿಯ ಶೆಟರ್ ಮುರಿದು ಒಳನುಗ್ಗಿದ ಕಳ್ಳರು, ಏಳು ಮೊಬೈಲ್ ಹಾಗೂ ಹೆಡ್ ಪೋನ್, ಬ್ಲೂಟೂತ್, ನೆಕ್ ಬ್ಯಾಂಡ್ ಹಾಗೂ 10,000 ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story