ಕೆ.ವೇದವ್ಯಾಸ ಭಟ್

ಉಡುಪಿ, ಸೆ.26: ಕರಂಬಳ್ಳಿ ವೆಂಕಟರಮಣ ಲೇಔಟ್ ನಿವಾಸಿ ನಿವೃತ್ತ ಮಿಲಿಟರಿ ಟೈಲರ್ ಕೆ.ವೇದವ್ಯಾಸ ಭಟ್ (81) ಇತ್ತೀಚೆಗೆ ನಿಧನರಾದರು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಚೆನ್ನೈಯ ಆವಾಡಿ ಎಂಬಲ್ಲಿ ಕೇಂದ್ರ ಸರಕಾರದ ಅರ್ಬನ್ ಕ್ಲೊಥಿಂಗ್ ಪ್ಯಾಕ್ಟರಿಯಲ್ಲಿ ಸುಮಾರು ೩೯ ವರ್ಷಗಳ ಕಾಲ ಮಿಲಿಟರಿ ಸೈನಿಕರಿಗೆ ಬಟ್ಟೆಯನ್ನು ಹೊಲಿದು ಕೊಡುತಿದ್ದರು. ಅಲ್ಲದೆ ಬಿಡುವಿನ ಸಮಯದಲ್ಲಿ ಬಡಜನರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡುತಿದ್ದರು. ಅಲ್ಲದೇ ಬಡವರ ಶಿಕ್ಷಣಕ್ಕೆ ಸಹಾಯವನ್ನೂ ಮಾಡುತಿದ್ದರು.
ಮರಣಾನಂತರ ಕೆಎಂಸಿ ಆಸ್ಪತ್ರೆಗೆ ತನ್ನ ದೇಹದಾನ ಮಾಡುವಂತೆ ತಿಳಿಸಿದ್ದರಿಂದ ಪತ್ನಿ ಹಾಗೂ ಪುತ್ರಿ ಅವರ ದೇಹವನ್ನು ಮಣಿಪಾಲ ಕೆಎಂಸಿಗೆ ನೀಡಿದರು.
Next Story