ಮಲ್ಪೆ ತೊಟ್ಟಂ ಪರಿಶಿಷ್ಟ ಜಾತಿ ಮಹಿಳಾ ಮೀನುಗಾರರ ಸಂಘ: ವಾರ್ಷಿಕ ಮಹಾಸಭೆ
ಪ್ರತಿಭಾ ಪುರಸ್ಕಾರ, ಗೌರವ ಸನ್ಮಾನ

ಮಲ್ಪೆ, ಸೆ.26: ತೊಟ್ಟಂನ ಪರಿಶಿಷ್ಟಜಾತಿ ಮಹಿಳಾ ಮೀನುಗಾರರ ವಿವಿಧೊದ್ದೇಶ ಪ್ರಾಥಮಿಕ ಸಹಕಾರ ಸಂಘ ದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಕಾರ್ಯಾಲಯದ ಸಮುದಾಯದಾಯ ಭವನದಲ್ಲಿ ಸಂಘದ ಅಧ್ಯಕ್ಷರಾದ ರಾಧಾ ತೊಟ್ಟಂರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುಂದರಿ ಬಲರಾಂ ನಗರ, ನಿರ್ದೇಶಕರಾದ ಕೆ.ಸಂಕಮ್ಮ ಲಕ್ಷ್ಮೀನಗರ, ಶಶಿಕಲಾ ಮಲ್ಪೆ, ಯಶೋಧ ತೊಟ್ಟಂ, ರೋಹಿಣಿ ಕೊಡವೂರು, ಕುಸುಮ ತೊಟ್ಟಂ, ಶಾರದ ಮಲ್ಪೆ, ದಿವ್ಯ ತೊಟ್ಟಂ, ಜ್ಯೋತಿ ಕೆಳಾರ್ಕಳಬೆಟ್ಟು, ಸುಮತಿ ತೊಟ್ಟಂ, ಸುಂದರಿ ಮಲ್ಪೆ, ಕುಸುಮ ಮಲ್ಪೆ, ಉಪಸ್ಥಿತರಿದ್ದರು.
ಮುಖ್ಯಅತಿಥಿಗಳಾಗಿ ಕೊಜಕೊಳದ ಸಮಾಜಸೇವಕರಾದ ದಯಾನಂದ ಶೆಟ್ಟಿ, ಯಶೋಧ ಶೇಖರ್, ಕುಂದರ್ ಕೆಳಾರ್ಕಳಬೆಟ್ಟು, ಪಿ.ಮಮತಾ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ನಿರ್ಮಿತಿ ಕೇಂದ್ರದ ಅರುಣ್‌ಕುಮಾರ್, ಬ್ರಹ್ಮಾವರ ಉಪತಹಶೀಲ್ದಾರ್ ರಾಘವೇಂದ್ರ, ಡಾ.ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಂಕರ್ ಮಲ್ಲಾರ್, ಮೆಸ್ಕಾಂನ ಇಂಜಿನಿಯರ್ ಎಂ.ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ರಾದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಾದ ಪ್ರಣೀತ್ ಎಂ.ಜಿ.ಕಟಪಾಡಿ, ವೈಷ್ಣವಿ ಕೊಡವೂರು, ದೀಕ್ಷಾ ಕೊರಂಗ್ರಪಾಡಿ ಹಾಗೂ ಧನ್ಯಶ್ರೀ ಗುಜ್ಜರಬೆಟ್ಟು ಇವರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಬುಡಕಟ್ಟು ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಪ್ರಥಮ ಮಹಿಳಾ ಸಾಧಕಿ ಎನಿಸಿದ ಡಾ.ಸಬಿತಾ ಗುಂಡ್ಮಿ, ಯೋಗ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ.ರಶ್ಮಿತಾ ಮಲ್ಪೆ ನೆರ್ಗಿ, ಸಂಗೀತ ಕ್ಷೇತ್ರದಲ್ಲಿ ರಾಜ್ಯಮಟ್ಟದ ಕರುನಾಡ ಚೇತನ ಪ್ರಶಸ್ತಿ ಪಡೆದ ಅಶ್ವಿನಿ ಕಂಚಿನಡ್ಕ, ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಸ್ವಸ್ತಿಕ್, ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಮಹಾಲಕ್ಷ್ಮೀ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ವನಿತಾ ಮಂಜುನಾಥ್ ಆರೂರು ಸಂಘದ ಲೆಕ್ಕಪತ್ರ ಮಂಡಿಸಿದರು. ಸಲಹಾ ಸಮಿತಿ ಸದಸ್ಯ ಪ್ರಶಾಂತ್ ತೊಟ್ಟಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







