ಕೋಲಾರ | ಪಿಎಫ್ಐ ಜಿಲ್ಲಾಧ್ಯಕ್ಷ ಸಹಿತ ಹಲವು ಮುಖಂಡರು ಪೊಲೀಸ್ ವಶಕ್ಕೆ
ಕೋಲಾರ, ಸೆ.27: ಪಾಪುಲರ್ ಫ್ರಂಟ್ ಆಫ್ ಇಂಡಿಯಾ(PFI) ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಯ ಏಳು ಮಂದಿ ಮುಖಂಡರನ್ನು ಮಂಗಳವಾರ ಬೆಳ್ಳಂಬೆಳಗ್ಗೆ ಕೋಲಾರ ಪೊಲಿಸರು ವಶಕ್ಕೆ ಪಡೆದಿದ್ದಾರೆ.
ಪಿಎಫ್ಐ ಜಿಲ್ಲಾಧ್ಯಕ್ಷ, ಇಲ್ಲಿನ ವಿನಾಯಕ ನಗರದ ನಿವಾಸಿ ಇಮ್ತಿಯಾಝ್(36), ಎಸ್.ಎಸ್.ಮಖಾನ್ ನ ಸಿದ್ದೀಕ್ ಪಾಷಾ, ವಾಸಿಂ ಪಾಷಾ(28), ಅಲ್ಲಾ ಬಕ್ಷ್(28), ಮಿಲ್ಲತ್ ನಗರದ ನಯಾಝ್ ಪಾಷಾ(24), ಶಹೀನ್ ಷಾ ನಗರದ ಶಹಬಾಝ್ ಪಾಷಾ (30) ಹಾಗೂ ಶಹೀದ್ ನಗರದ ನೂರ್ ಪಾಷಾ(31) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಇವರನ್ನು ಸೆಕ್ಷನ್ 107ರ ಅಡಿಯಲ್ಲಿ ಬಂಧಿಸಲಾಗಿದ್ದು, ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ದ.ಕ., ಉಡುಪಿ ಜಿಲ್ಲೆಗಳ ವಿವಿಧೆಡೆ ಪೊಲೀಸ್ ದಾಳಿ: PFI ಮುಖಂಡರು ವಶಕ್ಕೆ
Next Story