ಉಳ್ಳಾಲ ತಾಲೂಕು ಎರಡನೆ ಬ್ಯಾರಿ ಸಾಹಿತ್ಯ ಸಮ್ಮೇಳನ; ಕವನ ರಚನೆ, ಮೆಹಂದಿ ಸ್ಪರ್ಧೆಗಳಿಗೆ ಆಹ್ವಾನ

ದೇರಳಕಟ್ಟೆ, ಸೆ.27: ಮೇಲ್ತೆನೆ (ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ) ಇದರ ವತಿಯಿಂದ ಉಳ್ಳಾಲ ತಾಲೂಕು 2ನೆ ಬ್ಯಾರಿ ಸಾಹಿತ್ಯ ಸಮ್ಮೇಳನವು ಅಕ್ಟೋಬರ್ 15ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಸಮ್ಮೇಳನದ ಪ್ರಯುಕ್ತ ಬ್ಯಾರಿ ಕವನ ರಚನೆ ಮತ್ತು ಮೆಹಂದಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎರಡೂ ಸ್ಪರ್ಧೆಗಳನ್ನು ಅಕ್ಟೋಬರ್ ೧೫ರಂದು ಬೆಳಗ್ಗೆ ಸಮ್ಮೇಳನದ ಸಭಾಂಗಣದಲ್ಲೇ ನಡೆಸಲಾಗುವುದು.
ಕವನ ರಚನಾ ಸ್ಪರ್ಧೆ: ಕವನದ ಶೀರ್ಷಿಕೆಯನ್ನು ಸ್ಪರ್ಧೆಗೆ ಅರ್ಧ ಗಂಟೆ ಮುಂಚಿತವಾಗಿ ಸ್ಪರ್ಧಾಳುಗಳಿಗೆ ನೀಡಲಾಗುವುದು. ಬಳಿಕ ಕವನ ಬರೆಯಲು 1 ಗಂಟೆಯ ಕಾಲಾವಕಾಶ ನೀಡಲಾಗುವುದು. ಕವನ ರಚನೆ ಸ್ಪರ್ಧೆಯು (ಗಂಡು ಮತ್ತು ಹೆಣ್ಣು) ಮುಕ್ತವಾಗಿರುತ್ತದೆ. ವಯಸ್ಸಿನ ಪರಿಮಿತಿ ಇಲ್ಲ. ಆದರೆ ಬ್ಯಾರಿ ಭಾಷಿಗರಾಗಿರಬೇಕು.
ಮೆಹಂದಿ ಸ್ಪರ್ಧೆ: ಬ್ಯಾರಿ ಭಾಷಿಗ ಮಹಿಳೆಯರು ಮಾತ್ರ ಭಾಗವಹಿಸಬಹುದು. ವಯಸ್ಸಿನ ಪರಿಮಿತಿ ಇಲ್ಲ. ಯಾವುದೇ ಶೈಲಿಯ ಮೆಹಂದಿ ರಚಿಸಬಹುದು. ಸ್ಪರ್ಧೆಯು ಏಕ ವ್ಯಕ್ತಿಯದ್ದಾಗಿರುತ್ತದೆ. ಮೆಹಂದಿ ರಚಿಸಲು ೧ ಗಂಟೆಯ ಕಾಲಾವಕಾಶ ನೀಡಲಾಗುವುದು. ಮೆಹಂದಿ ರಚಿಸಲು ಬೇಕಾದ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ತರಬೇಕು.
ಈ ಎರಡೂ ಸ್ಪರ್ಧೆಯಲ್ಲಿ ಭಾಗವಹಿಸಲು ಅಸಕ್ತಿಯುಳ್ಳವರು ಅಕ್ಟೋಬರ್ 13ರೊಳಗೆ ಮೊ.ಸಂ. 9481017495ನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.