ಸುರತ್ಕಲ್: ಭಾರ್ಗವಿ ಫೈನಾನ್ಸ್ ಹೆಸರಿನಲ್ಲಿ ವಂಚನೆ ಪ್ರಕರಣ; ಅಶೋಕ್ ಭಟ್, ಪತ್ನಿ ವಿದ್ಯಾಭಟ್ ಬಂಧನ

ಅಶೋಕ್ ಭಟ್ - ವಿದ್ಯಾಭಟ್
ಸುರತ್ಕಲ್, ಸೆ. 27: ಇಲ್ಲಿನ ಭಾರ್ಗವಿ ಫೈನಾನ್ಸ್ ಮತ್ತು ಚಿಟ್ ಫಂಡ್ ನಡೆಸಿ ಅಮಾಯಕರಿಗೆ ವಂಚಿಸಿದ ಪ್ರಕರಕ್ಕೆ ಸಂಬಂಧಿಸಿ ಭಾರ್ಗವಿ ಫೈನಾನ್ಸ್ ಮಾಲಕ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾಭಟ್ ರನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ.
ಭಾರ್ಗವಿ ಫೈನಾನ್ಸ್ ಮತ್ತು ಚಿಟ್ ಫಂಡ್ ಮಾಡಿ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾಭಟ್ ಮತ್ತು ಪುತ್ರಿ ಪ್ರಿಯಾಂಕ ಭಟ್ ಎಂಬವರು ಕೋಟ್ಯಂತರ ರೂ. ವಂಚಿಸಿದ್ದಾರೆ ಎಂದು ಸುರತ್ಕಲ್ ಮೂಲದ ದೀಪಕ್ ಕುಮಾರ್ ಶೆಟ್ಟಿ ಎಂಬವರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಸೆನ್ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಭಾರ್ಗವಿ ಫೈನಾನ್ಸ್ ಮಾಲಕ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾಭಟ್ ರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 5 ದಿನಗಳ ಕಾಲ ಸೆನ್ ಪೊಲೀಸ್ ಅಧಿಕಾರಿಗಳ ಕಸ್ಟಡಿಗೆ ನೀಡಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
Next Story